ಘಟಪ್ರಭಾ ಪುರಸಭೆಯ ವ್ಯಾಪ್ತಿಯ ವಾರ್ಡ ನಂ 11ರಲ್ಲಿ ನೂತನ ಬೋರವೆಲ್
ಘಟಪ್ರಭಾ:ಗೋಕಾಕ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ರಮೇಶ ಜಾರಕಿಹೊಳಿ ಅವರ ಆದೇಶದಂತೆ ಹಾಗೂ ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ರವರ ಮಾರ್ಗದರ್ಶನದಂತೆ ಇಂದು ಘಟಪ್ರಭಾ ಪುರಸಭೆಯ ವ್ಯಾಪ್ತಿಯ ವಾರ್ಡ ನಂ 11ರ ಪುರಸಭೆ ಆವರಣದಲ್ಲಿ ಬೋರವೆಲ್ ಕೊರೆಯಲಾಯಿತು.
ಹಿರಿಯ ಮುಖಂಡರು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಡಿ ಎಮ್ ದಳವಾಯಿ ಅವರು ಬೋರವೆಲ್ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿಯಾದ ಶ್ರೀಮತಿ ಎಮ್ ಎಸ್ ಪಾಟೀಲ,ಮಾಜಿ ಸದಸ್ಯರಾದ ಪ್ರವೀಣ ಮಟಗಾರ,ಮಲ್ಲಿಕಾರ್ಜುನ ತುಕ್ಕಾನಟ್ಟಿ,ಇಮ್ರಾನ್ ಬಟಕುರ್ಕಿ,ಗುತ್ತಿಗೆದಾರರಾದ ಪರಶುರಾಮ ಗಾಡಿವಡ್ಡರ,ಅಪ್ಪಾಸಾಬ ಮುಲ್ಲಾ,ನೂರ ಪೀರಜಾದೆ,ಹಾಗೂ ಪುರಸಭೆಯ ಸರ್ವ ಸಿಬ್ಬಂದಿ ವರ್ಗದವರು ಮತ್ತು ಇನ್ನೂ ಅನೇಕರು ಉಪಸ್ಥಿತರಿದ್ದರು.
Laxmi News 24×7