Breaking News

H.E.R.F FOUNDATION BOAT 15 ವರ್ಷಗಳ ಕನಸು ನನಸು

Spread the love

H.E.R.F FOUNDATION BOAT
15 ವರ್ಷಗಳ ಕನಸು ನನಸು
‘ಹೆಲ್ಪ್ ಲೈನ್ ಎಮರ್ಜೆನ್ಸಿ ರೆಸ್ಕ್ಯೂ ಫೌಂಡೇಶನ್‌’ಗೆ ಹೊಸ ‘ಸ್ಕೂಟರ್ ಬೋಟ್’ ಸೇರ್ಪಡೆ
15 ವರ್ಷಗಳ ಕನಸು ನನಸು
ಹೊಸ ‘ಸ್ಕೂಟರ್ ಬೋಟ್’ ಸೇರ್ಪಡೆ
‘ಹೆಲ್ಪ್ ಲೈನ್ ಎಮರ್ಜೆನ್ಸಿ ರೆಸ್ಕ್ಯೂ ಫೌಂಡೇಶನ್‌’ನಿಂದ ಹರ್ಷ
ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಕಾರ್ಯಕ್ರಮ
ಬೆಳಗಾವಿಯ ಹೆಲ್ಪಲೈನ್ ಎಮರ್ಜೆನ್ಸಿ ರೆಸ್ಕ್ಯೂ ಫೌಂಡೇಶನ್ ತಂಡವು ಕಳೆದ 15 ವರ್ಷಗಳ ನಿರಂತರ ಸೇವಾ ಪಯಣದ ಮಹತ್ವದ ಮೈಲಿಗಲ್ಲನ್ನು ತಲುಪಿದೆ.
ಪ್ರವಾಹ, ಅಪಘಾತ ಮತ್ತು ಇತರೆ ತುರ್ತು ಸಂದರ್ಭಗಳಲ್ಲಿ ಮಾನವ ಸೇವೆ ಸಲ್ಲಿಸುತ್ತಿರುವ ಈ ತಂಡವು, “ಜನಸೇವೆಗೆ ನಮ್ಮದೇ ಸ್ವಂತ ಬೋಟ್ ಇರಬೇಕು” ಎಂಬ ಕನಸನ್ನು ಇಂದು ಸಾಕಾರಗೊಳಿಸಿದೆ. ದಾನಿ ಸಂಸ್ಥೆಯೊಂದರ ಉದಾರ ಸಹಾಯದಿಂದ ಹೊಸದಾಗಿ ಸೇರ್ಪಡೆಗೊಂಡಿರುವ ‘ಸ್ಕೂಟರ್ ಬೋಟ್’ ಅನ್ನು ಬೆಳಗಾವಿಯ ಕಿಲ್ಲಾ ಕೆರೆಯಲ್ಲಿ ಉದ್ಘಾಟಿಸಲಾಯಿತು.
ಈ ಬೋಟ್ ಸೇರ್ಪಡೆಯಿಂದ ಫೌಂಡೇಶನ್‌ನ ಪ್ರಾಣರಕ್ಷಣೆ ಮತ್ತು ಮಾನವಸೇವೆಯ ಧ್ಯೇಯಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಈ ಸಂದರ್ಭವನ್ನು ಕೇವಲ ಸಂಭ್ರಮದ ಕ್ಷಣವಾಗಿ ಅಲ್ಲದೆ, 15 ವರ್ಷಗಳ ಸೇವಾ ಪ್ರಯಾಣದಲ್ಲಿ ಬೆಂಬಲಿಸಿದ ಪ್ರತಿ ಸ್ವಯಂಸೇವಕ ಮತ್ತು ಬೆಂಬಲಿಗರ ಹೆಮ್ಮೆಯ ಕ್ಷಣ ಎಂದು ಫೌಂಡೇಶನ್ ಬಣ್ಣಿಸಿದೆ.
ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರಲ್ಲಿ Dcp ನಾರಾಯಣ ಬರಮನಿ ಸರ್, Dfo ರಂಗನಾಥ ರಾಠೋಡ (BGM), Scoc ತಂಡ ಮತ್ತು H.E.R.F ರೆಸ್ಕ್ಯೂ ಟೀಮ್‌ನ ಸಿಇಓ ಬಸವರಾಜ ಹಿರೇಮಠ್ ಮತ್ತು ತಂಡದ ಸದಸ್ಯರು ಪಾಲ್ಗೊಂಡಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ