Breaking News

ಸ ಸಂಗ್ರಹಿಸುವ ವಾಹನದಿಂದ ಆದಾಯ: ಟಿಪ್ಪರ್​ಗಳ ಮೂಲಕ ಜಾಹೀರಾತು ಪ್ರಸಾರಕ್ಕೆ ಮುಂದಾದ ಹುಬ್ಬಳ್ಳಿ-ಧಾರವಾಡ ಪಾಲಿಕೆ

Spread the love

ಹುಬ್ಬಳ್ಳಿ (ಧಾರವಾಡ): ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ನಿತ್ಯವೂ ಮನೆ ಮನೆಯಿಂದ ಕಸ ಸಂಗ್ರಹಿಸಲು ಆಟೋ ಟಿಪ್ಪರ್‌ಗಳನ್ನು ನಿಯೋಜನೆ ಮಾಡಲಾಗಿದೆ. ಈ ಟಿಪ್ಪರ್​ಗಳು ನಿತ್ಯ ನಗರದ ಎಲ್ಲ ಮಾರ್ಕೆಟ್ ಹಾಗೂ ಬಡಾವಣೆಯಲ್ಲಿ ಕಸ ಸಂಗ್ರಹ ಮಾಡುತ್ತವೆ‌. ಈ ಟಿಪ್ಪರ್ ಗಳಿಂದ ವಾಣಿಜ್ಯ ಜಾಹೀರಾತು ಪ್ರಸಾರಕ್ಕೆ ಬಳಕೆ ಮಾಡುವ ಮೂಲಕ ಆದಾಯಗಳಿಸಲು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ.

ಅವಳಿ ನಗರದಲ್ಲಿ 300ಕ್ಕೂ ಹೆಚ್ಚಿರುವ ಆಟೋ ಟಿಪ್ಪರ್‌ಗಳಲ್ಲಿ ಈಗಾಗಲೇ ಆಡಿಯೋ ಸಂದೇಶವನ್ನು ಪ್ರಸಾರ ಮಾಡಲಾಗುತ್ತಿದೆ. ಮಹಾನಗರ ಪಾಲಿಕೆ ಆಸ್ತಿ ತೆರಿಗೆ, ಸ್ವಚ್ಚತೆ ಕಾಪಾಡುವುದು, ಹಸಿ ಕಸ, ಒಣಕಸ ಪ್ರತ್ಯೇಕಿಸುವುದು ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಆಡಿಯೋ ಪ್ರಸಾರ ಮಾಡಲಾಗುತ್ತಿದೆ.ಈಗ ಇದೇ ಟಿಪ್ಪರ್​ಗಳ ಮೂಲಕ ಖಾಸಗಿ ಕಂಪನಿಗಳ ಆಡಿಯೋ ಜಾಹೀರಾತು ಮತ್ತು ಬಾಡಿ ಬ್ರಾಂಡಿಂಗ್‌ಗೆ ತೆರೆದುಕೊಳ್ಳಲಿದೆ. ನಿತ್ಯ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಟೋ ಟಿಪ್ಪರ್‌ಗಳ ಮೂಲಕ ಕಸ ಸಂಗ್ರಹ ಮಾಡಲಾಗುತ್ತದೆ. ಈ ವಾಹನಗಳಲ್ಲಿ ಆಡಿಯೋ ಸಿಸ್ಟಮ್ ಅಳವಡಿಸಿ ವಾಣಿಜ್ಯ ಜಾಹೀರಾತುಗಳನ್ನು ಪ್ರಸಾರ ಮಾಡುವುದು ಸೂಕ್ತವೆಂದು ಪಾಲಿಕೆ ಮನಗಂಡಿದೆ.


Spread the love

About Laxminews 24x7

Check Also

ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಂಗಾಲಾದ ಬಾದಾಮಿ ರೈತರು: ವಾರವಾದರೂ ಮುಗಿಯದ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ!

Spread the love ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಂಗಾಲಾದ ಬಾದಾಮಿ ರೈತರು: ವಾರವಾದರೂ ಮುಗಿಯದ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ! • …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ