Breaking News

ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ ತನ್ನ 50ನೇ ಮಾಸಿಕ ಸಭೆಯನ್ನು ಅದ್ಧೂರಿಯಾಗಿ ಆಚರಿಸಿತು..

Spread the love

ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ ತನ್ನ 50ನೇ ಮಾಸಿಕ ಸಭೆಯನ್ನು ಅದ್ಧೂರಿಯಾಗಿ ಆಚರಿಸಿತು..
ಈ ವಿಶೇಷ ಸಭೆಯಲ್ಲಿ ಬಸವೇಶ್ವರ ಬ್ಯಾಂಕಿನ ಮಂಡಳಿಯವರು, ವಾಣಿಜ್ಯ ಮಂಡಳಿ, ಇಂಜಿನಿಯರ್ಸ್‌ ಅಸೋಸಿಯೇಷನ್‌, ಸಿಎ ಅಸೋಸಿಯೇಷನ್‌ ಸದಸ್ಯರು ಹಾಗೂ ಖ್ಯಾತ ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಅತಿಥಿಗಳು ಮತ್ತು ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದರು.
ಬೋರ್ಡ ಆಫ್ ಟ್ರಸ್ಟೀ ಅಧ್ಯಕ್ಷರಾದ ಕಿರಣ ಅಗಡಿ ಅವರು ಫೋರಮ್‌ನ ಸಾಧನೆಗಳನ್ನು ವಿವರಿಸಿದರು. ಕಾರ್ಯಕಾರಿಣಿ ಅಧ್ಯಕ್ಷರಾದ ಲಿಂಗರಾಜ ಜಗಜಂಪಿ ಅವರು ವ್ಯಾಪಾರದಲ್ಲಿ ಏಕತೆ, ನೈತಿಕತೆ ಮತ್ತು ಪರಸ್ಪರ ಬೆಳವಣಿಗೆಯ ಮಹತ್ವವನ್ನು ಒತ್ತಿಹೇಳಿದರು.
ಅತಿಥಿ ವೆಂಕಟೇಶ್ ಪಾಟೀಲ (ಎಂ.ಡಿ., ಬೆಳಗಾವಿ ಆಕ್ಸಿಜನ್) ಅವರು ಎಲ್‌ಬಿಎಫ್‌ನ ನವೀನತೆ ಮತ್ತು ಸಹಕಾರದ ಪ್ರಯತ್ನಗಳನ್ನು ಶ್ಲಾಘಿಸಿದರು.
ವಿಜಯಕುಮಾರ್ ಪಾಟೀಲ್ ಅವರು ಲಿಂಗಾಯಿತ ಬಿಜಿನೆಸ್ ಫೋರಮ್ ಎಲ್ಲ ಉದ್ಯೋಗಿಗಳನ್ನು ಒಂದುಗೂಡಿಸಿ ಉದ್ಯೋಗಗಳನ್ನು ಅಭಿವೃದ್ಧಿಪಡಿಸಿ ಸಬಲೀಕರಣ ಮಾಡುವ ಉದ್ದೇಶವನ್ನು ಹೊಂದಿದೆ ಎಂದರು.
ಇನ್ನು ಲಿಂಗಾಯಿತ ಜಗಜಂಪಿ ಅವರು ಕಳೆದ 4 ವರ್ಷಗಳಿಂದ ಲಿಂಗಾಯಿತ ಬಿಜಿನೆಸ್ ಫೋರಮ್ ಲಿಂಗಾಯಿತ ವ್ಯಾಪಾರಿಗಳಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ.
ಉತ್ತರ ಕರ್ನಾಟಕದಲ್ಲಿ ಲಿಂಗಾಯಿತ ವ್ಯಾಪಾರಿಗಳ ಏಳ್ಗೆಗಾಗಿ ಶ್ರಮಿಸಲಾಗುವುದು ಎಂದರು. ಬೈಟ್
ಕಾರ್ಯದರ್ಶಿ ಸಚಿನ್ ಬೈಲವಾಡ ಅವರು ಮುಂದಿನ ಕಾರ್ಯಕ್ರಮಗಳ ಮಾಹಿತಿ ನೀಡಿದರೆ, ಸದಸ್ಯತ್ವ ಸಮಿತಿಯ ಅಧ್ಯಕ್ಷರಾದ ಮಹಾಂತೇಶ ಪುರಾಣಿಕ್ ಅವರು ಕೃತಜ್ಞತೆ ಸಲ್ಲಿಸುವುದರೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಿದರು

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ