ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ
ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ
ಸಸಿ ನೆಟ್ಟ ಮಕ್ಕಳು
ಮಕ್ಕಳಲ್ಲಿ ಮೂಡಿದ ಪರಿಸರ ಜಾಗೃತಿ
ತುಂತುರು ಮಳೆ ಆ ನಡುವೆ ಹೆಚ್ಚು ಹಸಿರನ ವಾತಾವರಣ ಇದರ ಸವಿಯನ್ನು ಸವಿಯಲು ಎರಡು ಕಣ್ಣುಗಳು ನಾಲದು ಅಂತದರ ಮಧ್ಯೆ ವಿದ್ಯಾರ್ಥಿಗಳು ಚೆಂದನೆಯ ಧಿರಿಸು ಧರಿಸಿ ಕಾಡಿನ ಪರಿಸರದಲ್ಲಿ ಸಸಿ ನೆಡವುದು ಎಂದರೆ ಎಷ್ಟು ಅದ್ಭುತ ಅಲ್ಲವೇ ಹಾಗಾದ್ರೆ ಈ ಚಂದದ ದೃಶ್ಯ ಎಲ್ಲಿಯದು ಎಂದು ನೋಡೋಣ
ಬನ್ನಿ…
ಹೌದು ತುಂತುರು ಮಳೆ….ಅದರ ನಡುವೆ ಹಚ್ಚ ಹಸುರಿನ ವಾತಾವರಣ ಅಲ್ಲಿ ಕಲರ್‌ಫುಲ್ ಆಗಿ ಸೌಟ್ಸ್ ಯುನಿಫಾರ್ಮ, ಸ್ಪೋರ್ಟ್ಸ್ ಯುನಿಫಾರ್ಮ ಹಕ್ಕೊಂಡು ಆ ಪುಟ್ಟ ಪುಟ್ಟ ಕೈಗಳಿಂದ ಮಣ್ಣನ್ನು ಉಂಡೆಯನ್ನಾಗಿಸಿ ಅದರಲ್ಲಿ ಬೀಜ ಇಟ್ಟು, ಇದು ದೊಡ್ಡ ಮರವಾಗುತ್ತದೆ ಎಂದು ಹಲವಾರು ಆಸೆ ಹೊತ್ತ ಮಕ್ಕಳು ಹಸಿ ನೆಟ್ಟಿದ್ದಾರೆ.
ಹಾಗಾದ್ರೆ ಇದು ಎಲ್ಲಿ ಅಂತಿದಿರಾ ಬೆಳಗಾವಿಯ ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಜೈನ್ ಹೆರಿಟೇಜ್ ಶಾಲೆಯ ಮಕ್ಕಳು ಸಸಿ ನೆಟ್ಟು ಅರ್ಥಪೂರ್ಣವಾದ ಪರಿಸರ ದಿನ ಆಚರಿಸಲು ಮುಂದಾಗಿದ್ದಾರೆ.
ಮಂಗಳವಾರ ಹೈನ್ ಹೆರಿಟೇಜ್ ಶಾಲೆಯ ಗೌಟ್ಸ್ ಗೈಡ್ಸ್ ನ ಶಿಕ್ಷಕರಾದ ಶ್ರೀಮತಿ ಪಲ್ಲವಿ ನಾಡಕರ್ಣಿ ಹಾಗೂ ಸಹ ಶಿಕ್ಷಕಿ ಕಲ್ಪನಾ ಅವರ ಮಾರ್ಗದರ್ಶನದಲ್ಲಿ ಬೆಳಗಾವಿಯ ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಶಾಲೆಯ ಮಕ್ಕಳು ವಿವಿಧ ಬಗೆಯ ಸಸಿಗಳನ್ನು ನೆಟ್ಟು, ಸಂತಸದಿಂದ ಪರಿಸರ ದಿನವನ್ನು ಆಚರಿಸಿದ್ದಾರೆ. ಪರಿಸರ ದಿ ನದ ನಿಮಿತ್ತ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಹಮ್ಮಿಕೊಂಡಿದ್ದಾರೆ.
ಗಂಧದ ಸಸಿ, ಹಲಸಿನ ಸಸಿ ಹೀಗೆ ಹತ್ತು ಹಲವಾರು ಬಗೆಯ ಹಸಿಗಳು ಹಾಗೂ ಗಿಡಗಳ ಕುರಿತಾಗಿ ಅರಿತ ಮಕ್ಕಳು ತಾವೇ ಸ್ವತಃ ಹಲವಾರು ಬಗೆಯ ಹಸಿಗಳನ್ನು ನೆಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಅರಣ್ಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಹಲಸಿನ ಹಣ್ಣುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಕುರಿತು ಮಕ್ಕಳು ಮಾತನಾಡಿ ನಮಗೆ ಹಲಸಿನ ಮರ ಹೇಗ ಇರುತ್ತದೆ ಎಂದು ಗೊತ್ತೆಯಿರಲಿಲ್ಲ ಇಲ್ಲಿಗೆ ಬಂದು ಹಲವಾರು ಬಗೆಯ ಹಣ್ಣುಗಳ ಗಿಡಗಳ ಮಾಹಿತಿಯನ್ನು ಪಡೆದುಕೊಂಡವು ಎಂದರು.
ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿ ಆರ್‌ಎಫ್‌ಓ ಪುರುಷೋತ್ತಮ, ಛಲವಾದಿ, ಪರುಶುರಾಮ ಪಟ್ಟಣಶೆಟ್ಟಿ ಸೇರಿದಂತೆ ಅರಣ್ಯ ಸಿಬ್ಬಂದಿ ಹಾಗೂ ಜೈನ್ ಹೆರಿಟೇಜ್ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.
Laxmi News 24×7