Breaking News

ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಲಾದ ಪಾಲಾರ್ ನದಿಯ ಮೇಲಿನ ಸೇತುವೆಯ ಉದ್ಘಾಟನೆಯನ್ನು ಇಂದು ಮಾನ್ಯ ಹಿರಿಯ ಸಚಿವರಾದ ಶ್ರೀ ಕೆ. ಎಚ್. ಮುನಿಯಪ್ಪ ಅವರೊಂದಿಗೆ ನೆರವೇರಿಸಲಾಯಿತು

Spread the love

ಕೋಲಾರ ಜಿಲ್ಲೆಯ ಕೆ.ಜೀ.ಎಫ್ ತಾಲೂಕಿನ ನಲ್ಲೂರು ಮತ್ತು ನತ್ತ ಗ್ರಾಮಗಳ ನಡುವೆ, ಲೋಕೋಪಯೋಗಿ

ಇಲಾಖೆಯ ವತಿಯಿಂದ ನಿರ್ಮಿಸಲಾದ ಪಾಲಾರ್ ನದಿಯ ಮೇಲಿನ ಸೇತುವೆಯ ಉದ್ಘಾಟನೆಯನ್ನು ಇಂದು ಮಾನ್ಯ ಹಿರಿಯ ಸಚಿವರಾದ ಶ್ರೀ ಕೆ. ಎಚ್. ಮುನಿಯಪ್ಪ ಅವರೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕೆ.ಜೀ.ಎಫ್ ಶಾಸಕರಾದ ಶ್ರೀಮತಿ ರೂಪಕಲಾ ಎಂ. ಶಶಿಧರ್, ಬಂಗಾರಪೇಟೆ ಶಾಸಕರಾದ ಶ್ರೀ ಎಸ್. ಎನ್. ನಾರಾಯಣಸ್ವಾಮಿ, ಇಲಾಖೆಯ ಹಿರಿಯ ಅಧಿಕಾರಿಗಳು, ಪಕ್ಷದ ನಾಯಕರು, ಗಣ್ಯರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

ಈ ಸೇತುವೆಯ ನಿರ್ಮಾಣದಿಂದ ಪ್ರದೇಶದ ಜನರ ದೀರ್ಘಕಾಲದ ಕನಸು ನನಸಾಗಿದ್ದು, ಸ್ಥಳೀಯ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಗೊಂಡಿದೆ. ಇದರಿಂದ ಸಾರಿಗೆ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ಮತ್ತು ವೇಗ ದೊರಕಲಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ