Breaking News

ರಾಜ್ಯ ಹೈಕೋರ್ಟ್‌, ಇಸ್ರೇಲ್ ರಾಯಭಾರ ಕಚೇರಿಗೆ ಬೆದರಿಕೆ ಇ – ಮೇಲ್: ಪ್ರಕರಣ ದಾಖಲು

Spread the love

ಬೆಂಗಳೂರು: ಇಸ್ರೇಲ್ ರಾಯಭಾರ ಕಚೇರಿ ಹಾಗೂ ಹೈಕೋರ್ಟ್‌ನಲ್ಲಿ ಸ್ಫೋಟಕ ಇರಿಸಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ‌ ಕಿಡಿಗೇಡಿ ವಿರುದ್ಧ ಹಲಸೂರು ಹಾಗೂ ವಿಧಾನಸೌಧ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 19 ರಂದು ಇ- ಮೇಲ್ ಸ್ವೀಕರಿಸಲಾಗಿದ್ದು, ಪೊಲೀಸರು ತಪಾಸಣೆ ನಡೆಸಿದಾಗ ಇದೊಂದು‌ ಹುಸಿ‌ ಬೆದರಿಕೆ ಎಂದು ದೃಢಪಟ್ಟಿದೆ.

ಆರ್​ಡಿಎಕ್ಸ್​ ಇರಿಸಿರುವ ಬಗ್ಗೆ ಬೆದರಿಕೆ: ಇ-ಮೇಲ್​ ಖಾತೆಯಿಂದ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಇಸ್ರೇಲ್ ರಾಯಭಾರ ಕಚೇರಿ ಹಾಗೂ ಹೈಕೋರ್ಟ್‌ಗೆ ಪ್ರತ್ಯೇಕವಾಗಿ ಮೇಲ್ ಕಳುಹಿಸಿರುವ ಕಿಡಿಗೇಡಿ, ”6 RDX ಇರಿಸಲಾಗಿದ್ದು, ಅದು ಸ್ಫೋಟ ಆಗಲಿವೆ” ಎಂದು ಬರೆದಿದ್ದಾನೆ. ಈ ಬಗ್ಗೆ ಸಿಬ್ಬಂದಿಯು ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಪೊಲೀಸರ ಸರ್ಚ್ ಆಪರೇಷನ್ ಬಳಿಕ ಇದೊಂದು ಹುಸಿ ಬೆದರಿಕೆ ಎಂದು ತಿಳಿದು ಬಂದಿದೆ.

ಸದ್ಯ ಮೇಲ್ ಕಳಿಸಲಾದ ಖಾತೆಯ ಐಪಿ ಅಡ್ರೆಸ್ ಮೂಲಕ ಆರೋಪಿ ಪತ್ತೆಗೆ ಮುಂದಾಗಿದ್ದು, ಸರ್ವಿಸ್ ಪ್ರೊವೈಡರ್ ಕಂಪನಿಯಿಂದ ಮಾಹಿತಿ ಕೋರಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಂಬ್ ಸ್ಫೋಟಿಸುವುದಾಗಿ ಬರೆದು ಬೆದರಿಕೆ (ಇತ್ತೀಚೆಗಿನ ಪ್ರಕರಣ): ಬೆಂಗಳೂರಿನ ಅಪಾರ್ಟ್​​ಮೆಂಟ್ ಗೋಡೆಯೊಂದರ ಮೇಲೆ ಬಾಂಬ್ ಸ್ಫೋಟಿಸುವುದಾಗಿ ಬರೆದು ಬೆದರಿಕೆ ಹಾಕಿರುವ ಪ್ರಕರಣ ಕೆಲ ತಿಂಗಳುಗಳ ಹಿಂದೆ ನಡೆದಿತ್ತು. ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ವೊಂದರ ಗೋಡೆ ಮೇಲೆ ಈ ಬೆದರಿಕೆಯ ಬರಹ ಪತ್ತೆಯಾಗಿತ್ತು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ