Breaking News

ಬೆಳಗಾವಿಗರ ಕಿಚನ್ಸ್’ಗೆ ಆಧುನಿಕ ಸೌಲಭ್ಯ ನೀಡಲು ಮುಂದಾದ ಶ್ರೀರಾಮ ಇನ್ನೋವ್ಹೇಷನ್….

Spread the love

ಬೆಳಗಾವಿಗರ ಕಿಚನ್ಸ್’ಗೆ ಆಧುನಿಕ ಸೌಲಭ್ಯ ನೀಡಲು ಮುಂದಾದ ಶ್ರೀರಾಮ ಇನ್ನೋವ್ಹೇಷನ್….
ಗ್ಲೇನ್ ಲೈವ್ ಬೇಟರ್ ಮತ್ತು ಸರ್ವಿಟಿ ಇಟಾಲಿಯಾ ಕಂಪನಿಯ ಕಿಚನ್ ಅಪ್ಲಾಯನ್ಸ್ ಈ ಬೆಳಗಾವಿಯಲ್ಲಿಯೇ ಲಭ್ಯ…
ಶ್ರೀರಾಮ ಇನ್ನೋವ್ಹೇಷನ್’ನ ಹೊಸ ಹೆಜ್ಜೆ
ಬೆಳಗಾವಿಗರ ಕಿಚನ್ಸ್’ಗೆ ಆಧುನಿಕ ಸೌಲಭ್ಯ ನೀಡಲು ಉಪಕ್ರಮ
ಗ್ಲೇನ್ ಲೈವ್ ಬೇಟರ್ ಮತ್ತು ಸರ್ವಿಟಿ ಇಟಾಲಿಯಾ ಕಂಪನಿಯ
ಕಿಚನ್ ಅಪ್ಲಾಯನ್ಸ್ ಬೆಳಗಾವಿಯಲ್ಲಿಯೇ ಲಭ್ಯ…
ಬೆಳಗಾವಿಗರಿಗೆ ಕಳೆದ ಹಲವಾರು ವರ್ಷಗಳಿಂದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಹೊಸ ವಸ್ತುಗಳನ್ನು ಪರಿಚಯಿಸುವ ಶ್ರೀರಾಮ ಇನ್ನೋವ್ಹೇಷನ್ ದಿ ಇಂಟಿರಿಯರ್ ಮಾಲ್ ಜಗತ್ತಿನ ಎರಡು ಪ್ರಸಿದ್ಧ ಕಂಪನಿಗಳೊಂದಿಗೆ ಕೈ ಜೋಡಿಸಿ, ಬೆಳಗಾವಿಗರ ಕಿಚನ್’ಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ.
ಹೌದು, ಶ್ರೀರಾಮ ಇನ್ನೋವ್ಹೇಷನ್ ದಿ ಇಂಟಿರಿಯರ್ ಮಾಲ್, ಈಗ ಗ್ಲೇನ್ ಲೈವ್ ಬೇಟರ್ ಮತ್ತು ಸರ್ವಿಟಿ ಇಟಾಲಿಯಾದೊಂದಿಗೆ ಕೈ ಜೋಡಿಸಿ, ಬೆಳಗಾವಿಗರ ಕಿಚನ್’ಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ. ಇವರ ನೂತನ ಉಪಕ್ರಮಕ್ಕೆ ನವರಾತ್ರಿಯ ಶುಭ ದಿನದಲ್ಲಿ ವಿವಿಧ ಗಣ್ಯರಿಂದ ದೀಪ ಬೆಳಗಿಸುವ ಮೂಲಕ ಚಾಲನೆಯನ್ನು ನೀಡಲಾಯಿತು.
ಇಂದಿನ ಆಧುನಿಕ ಯುಗದಲ್ಲಿ ಆಧುನಿಕ ಸೌಲಭ್ಯಗಳುಳ್ಳ ಅಡುಗೆ ಮನೆ ಇರಬೇಕೆಂಬುದು ಎಲ್ಲರ ಇಚ್ಛೆಯಾಗಿರುತ್ತದೆ. ಸಚಿನ್ ಮತ್ತು ಪುನಂ ಹಂಗಿರಗೇಕರ ದಂಪತಿಗಳು ಆಧುನಿಕ ಸೌಲಭ್ಯಗಳನ್ನು ಹೊಂದಬೇಕೆನ್ನುವ ಬೆಳಗಾವಿಗರಿಗೆ ಸಹಾಯಕ ಉಪಕ್ರಮವನ್ನು ಕೈಗೆತ್ತಿಕೊಂಡಿರುವುದು ಪ್ರಶಂಸನೀಯ. ಎಲ್ಲರೊಂದಿಗೂ ಅತ್ಯಂತ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿರುವ ಸಚಿನ್ ಹಂಗೀರಗೇಕರ ಅವರ ಈ ಹೊಸ ಉಪಕ್ರಮ ನವರಾತ್ರಿಯಲ್ಲಿ ಆರಂಭಗೊಂಡಿದ್ದು, ತಾಯಿ ದುರ್ಗೆಯೂ ಅವರಿಗೆ ಯಶಸ್ಸನ್ನು ನೀಡಲಿ ಎಂದು ಚೇಂಬರ್ ಆಫ್ ಕಾಮರ್ಸ್’ನ ನಿರ್ದೇಶಕರಾದ ರಾಜೇಂದ್ರ ಮುತಗೇಕರ ಹಾರೈಸಿದರು.
ಇನ್ನು ಇಂಡಿಯನ್ ಇನ್ಸಟಿಟ್ಯೂಷನ್ ಆಫ್ ಅರ್ಕಿಟೆಕ್ಟ್’ನ ಅಧ್ಯಕ್ಷರಾದ ಕುಲದೀಪ ಹಂಗೀರಗೇಕರ ಅವರು ಶ್ರೀರಾಮ ಇನ್ನೋವೆಷನ್ ಪ್ರತಿ 6 ತಿಂಗಳಿಗೊಮ್ಮೆ ಹೊಸ ಹೊಸ ಉಪಕ್ರಮಗಳನ್ನು ಮಾರುಕಟ್ಟೆಗೆ ಪರಿಚರಿಸುತ್ತಿವೆ. ಅವರು ಇನ್ನು ಉತ್ತುಂಗಕ್ಕೆರಲಿ ಎಂದು ಹರಸಿದರು. ಬೈಟ್
ಇನ್ನು ಕ್ರೇಡಾಯ್ ಅಧ್ಯಕ್ಷ ಯುವರಾಜ್ ಹುಲಜಿ ಅವರು ಕಳೆದ 37 ವರ್ಷಗಳಿಂದ ಸಚೀನ್ ಹಂಗೀರಗೇಕರ ಬೆಳಗಾವಿಗರಿಗೆ ಸೇವೆ ನೀಡುತ್ತಿದ್ದಾರೆ. ಈಗ ಅಡುಗೆ ಮನೆಗೆ ಹೊಸ ಅತ್ಯಾಧುನಿಕ ಲುಕ್ ನೀಡುವ ಸೌಲಭ್ಯ ಕಲ್ಪಿಸುತ್ತಿದ್ದಾರೆ. ಅವರ ಈ ಅವಿರತ ಸೇವೆಯೂ ಹೀಗೆಯೆ ಮುಂದುವರೆಯಲಿ. ಉತ್ತರ ಕರ್ನಾಟಕದಲ್ಲಿಯೇ ಇದು ದೊಡ್ಡದಾದ ಶೋರೂಂ ಎಂದರೇ ತಪ್ಪಾಗಲಾರದು. ಒಂದೇ ಸೂರಿನಡಿ ಇಷ್ಟು ಬಗೆಯ ವಸ್ತುಗಳು ಇಲ್ಲಿ ದೊರೆಯುತ್ತಿರುವುದು ಪ್ರಶಂಸನೀಯ ಎಂದರು.
ಕನ್ಸಲ್ಟಿಂಗ್ ಸಿವ್ಹಿಲ್ ಇಂಜಿನೀಯರ್ಸ್ ಅಸೋಸಿಯೇಷನ್’ನ ಅಧ್ಯಕ್ಷ ರಮೇಶ್ ತುಬಚಿ ಅವರು ಬೆಳಗಾವಿಗರಿಗೆ ಹಾರ್ಡವೇರ್ ಎಂದರೇ ಸಾಕು. ಶ್ರೀರಾಮ ಇನ್ನೋವ್ಹೇಷನ್ ನೆನಪಾಗಿ ಬಿಡುತ್ತದೆ. ಅಷ್ಟು ಖ್ಯಾತಿಯನ್ನು ಶ್ರೀರಾಮ ಇನ್ನೋವ್ಹೇಷನ್ ಬೆಳಗಾವಿಯಲ್ಲಿ ಪಡೆದಿದೆ. ಸಚೀನ್ ಹಂಗಿರಗೇಗರ ಮತ್ತು ಅವರ ಕುಟುಂಬದ ಸ್ವಭಾವ ಗ್ರಾಹಕರಿಗೆ ಒಳ್ಳೆಯ ಸೇವೆಗಳನ್ನು ನೀಡಿ, ಬೆಳಗಾವಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು. ಬೈಟ್
ಬೆಂಗಳೂರಿನಿಂದ ಬಂದ ಸರ್ವೇಟಿ ಇಟಾಲಿಯಾ ಕಂಪನಿಯ ಅಭಿಷೇಕ್ ಜೈನ್ ಅವರು ಶ್ರೀರಾಮ ಇನ್ನೋವ್ಹೇಷನ್’ನಲ್ಲಿ ತಮ್ಮ ಕಂಪನಿಯ ಅಪಗ್ರೇಟೆಡ್ ವಸ್ತುಗಳು ಲಭ್ಯವಿವೆ ಎಂದು ಮಾಹಿತಿಯನ್ನು ನೀಡಿದರು. ಬೈಟ್
ಗ್ಲಾನ್ ಕಂಪನಿಯ ಸತೀಶ್ ಎಂ.ಸಿ. ಆಧುನಿಕ ಕಿಚನ್’ಗೆ ಬೇಕಾಗುವ ಚಿಮಣಿಗಳು ಸೇರಿದಂತೆ ಇನ್ನಿತರ ಕಿಚನ್ ಅಪ್ಲಾಯಿನ್ಸ್’ಗಳ ಮಾಹಿತಿಯನ್ನು ನೀಡಿದರು. ಬೈಟ್
ಇನ್ನು ಶ್ರೀರಾಮ ಇನ್ನೋವ್ಹೇಷನ್’ನ ಸಂಚಾಲಕರಾದ ಸಚೀನ್ ಹಂಗೀರಗೇಕರ ಅವರು, ಗ್ಲೇನ್ ಕಿಚನ್ ಅಪ್ಲಾಯನ್ಸಿಸ್, ಸರ್ವಿಟಿ ಬ್ರ್ಯಾಂಚ್ ಇಟಾಲಿಯನ್’ನ್ನು ಲೋಕಾರ್ಪಣೆಗೊಳಿಸಲಾಗಿದೆ. ಗ್ಲೇನ್ ಕಂಪನಿಯ ಚಿಮಣಿ, ಮೈಕ್ರೋವೆವ್ ವೋವನ್, ವಿವಿಧ ಉತ್ಪನ್ನಗಳು ದೊರೆಯುತ್ತವೆ. ಸರ್ವಿಟಿ ಬ್ರಾಂಡ್ ಇಟಾಲಿಯನ್ ಕಿಚನ್ ಫೂಲ್ಲಿ ಆಟೋಮೇಟಿಕ್ ಕಿಚನ್ ಲಭ್ಯವಿದೆ. ಈ ಸೌಲಭ್ಯಗಳನ್ನು ತರಲು ಬೆಳಗಾವಿಗರಿಗೆ ಬೆಂಗಳೂರು, ಪುಣೆ, ಮುಂಬೈನಂತಹ ಮೆಟ್ರೋ ಸಿಟಿಗೆ ಹೋಗಬೇಕಾಗಿತ್ತು. ಕಳೆದ 30 ವರ್ಷಗಳ ಅನುಭವ ಮತ್ತು ಬೆಳಗಾವಿಗರ ಪ್ರೀತಿ ಪಾತ್ರದ ಹಿನ್ನೆಲೆ ಇಂದು ಹೊಸ ಸೇವೆಯನ್ನು ಆರಂಭಿಸಲಾಗಿದೆ. ಇದರ ಸದುಪಯೋಗ ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಬೆಳಗಾವಿಯ ಚೇಂಬರ್ ಆಫ್ ಕಾಮರ್ಸ್’ನ ಅಧ್ಯಕ್ಷ ಪ್ರಭಾಕರ ನಾಗರಮುನ್ನೊಳ್ಳಿ, ಗ್ಲೆನ್ ಕಂಪನಿಯ ಉಪಾಧ್ಯಕ್ಷ ಸೌಮೇಂದ್ರ ಮೋಹನ್ ಮೋಹಂತಿ, ನ್ಯಾಯಾಧೀಶ ಕಮಲ್ ಕಿಶೋರ್ ಜೋಷಿ, ಕ್ರೆಡಾಯಿ ಮಹಿಳಾ ವಿಭಾಗದ ಅಧ್ಯಕ್ಷೆ ಕರುಣಾ ಹಿರೇಮಠ, ಕಾರ್ಯದರ್ಶಿ ಪ್ರಶಾಂತ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು. ಹಾಗಾದರೇ ಇನ್ನೇಕೆ ತಡ ಈಗಲೇ ಭೇಟಿ ನೀಡಿರಿ ಸಕ್ಷಮ್ ಮಾರ್ಕೇಟಿಂಗ್ ಮಹಾತ್ಮಾಫೂಲೆ ರಸ್ತೆ, ಶಹಾಪುರ, ಬೆಳಗಾವಿ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ