Breaking News

ಕಳ್ಳತನವಾದ 98 ಕ್ರೆಸ್ಟ್​ ಗೇಟ್‌ಗಳ ಬಗ್ಗೆ ಇನ್ನೂ ಸಿಗದ ಸುಳಿವು! ರೈತರಲ್ಲಿ ಹೆಚ್ಚಾದ ಆತಂಕ

Spread the love

ಹಾವೇರಿ: ವರದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬ್ರಿಡ್ಜ್ ಕಂ ಬ್ಯಾರೇಜ್‌ನ 98 ಕ್ರೆಸ್ಟ್​ ಗೇಟ್‌ಗಳನ್ನು ಖದೀಮರು ಕಳ್ಳತನ ಮಾಡಿಕೊಂಡು ಹೋಗಿದ್ದು, ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು ಗ್ರಾಮ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ರೈತರು ಇದೀಗ ಆತಂಕದಲ್ಲಿದ್ದಾರೆ.

ರೈತರಿಗೆ ಹಾಗೂ ಜನ ಜಾನುವಾರುಗಳು ಅನುಕೂಲವಾಗಲಿ ಎಂಬ ಕಾರಣದಿಂದ ಕಳಸೂರು ಬಳಿ ವರದಾ ನದಿಗೆ ಪ್ರತಿವರ್ಷ ಮುಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ಕ್ರೆಸ್ಟ್​ ಗೇಟ್‌ ಅಳವಡಿಸಲಾಗುತ್ತಿತ್ತು. ಇದರಿಂದ ಕಳಸೂರು ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ರೈತರಿಗೆ ನೀರಾವರಿಗೆ ನೀರು ಸಿಗುತ್ತಿತ್ತು. ಜಾನುವಾರುಗಳಿಗೆ ಕುಡಿಯುವ ನೀರು ಜೊತೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೂ ನೀರು ಲಭ್ಯವಾಗುತ್ತಿತ್ತು. ಜೊತೆಗೆ ನದಿಯಲ್ಲಿ ನೀರು ನಿಂತರೆ ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲ ಹೆಚ್ಚಾಗುತ್ತಿತ್ತು. ಆದರೆ, ಪ್ರಸ್ತುತ ವರ್ಷ ಕ್ರೆಸ್ಟ್​ ಗೇಟ್‌ ಅಳವಡಿಸಲು ಗೇಟ್‌ಗಳಿಲ್ಲ. ಇತ್ತೀಚೆಗೆ 137 ಕ್ರೆಸ್ಟ್​ ಗೇಟ್‌ಗಳಲ್ಲಿ 98 ಗೇಟ್​ಗಳು ಕಳ್ಳತನವಾಗಿದ್ದರಿಂದ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ