ಅಂಗನವಾಡಿಯಿಂದಲೇ ಆರಂಭವಾಗಲಿ ಡಿಜಿಟಲ್ ಕಲಿಕೆ”
ನಿಪ್ಪಾಣಿ ಮತಕ್ಷೇತ್ರದ ಭೋಜ ಗ್ರಾಮದಲ್ಲಿ “ಕೇಂದ್ರ ಪುರಸ್ಕೃತ ಸಕ್ಷಮ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ದೂರದರ್ಶನ ಟಿ.ವಿ.LED TV ವಿತರಣೆ” ಮಾಡಿ, ಚಾಲನೆ ನೀಡಲಾಯಿತು.
ಸಕ್ಷಮ ಯೋಜನೆಯಡಿ ನೀಡಲಾದ LED ಟಿವಿಗಳು ಅಂಗನವಾಡಿಗಳಲ್ಲಿ ಬುದ್ಧಿವಂತಿಕೆಯ ಬೆಳಕನ್ನು ಹರಡುವ ಸಾಧನವಾಗಲಿದೆ.
ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಲು,ಆಧುನಿಕ ತಂತ್ರಜ್ಞಾನದಿಂದ ಪಾಠ, ಕಥೆಗಳು ಹಾಗೂ ಗೀತೆಗಳನ್ನು ತಲುಪಿಸಲು ಸಹಾಯವಾಗುತ್ತದೆ.
ನಿಪ್ಪಾಣಿ ಕ್ಷೇತ್ರದಲ್ಲಿ ಇನ್ನೂವರೆಗೆ 26 ಹೊಸ ಕಟ್ಟಡ,174 ಅಂಗನವಾಡಿ ಕೇಂದ್ರಗಳನ್ನು ದುರಸ್ತಿ ಮಾಡಿ ಪುಟಾಣಿಗಳ ಕಲಿಕೆಗೆ ಅನುಕೂಲ ಮಾಡಿ ಕೊಡಲಾಗಿದೆ.
ಈ ಸಂದರ್ಭದಲ್ಲಿ ಸಿ.ಡಿ.ಪಿ.ಓ.ಪಕ್ಷದ ಕಾರ್ಯಕರ್ತರು,ಅಂಗನವಾಡಿ ಕಾರ್ಯಕರ್ತರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
Laxmi News 24×7