Breaking News

ಅಮೆರಿಕದ ಐಸಿಎಸ್ ಇಂಟರ್‌ನ್ಯಾಷನಲ್‌ನಿಂದ ಉಡುಪಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್​ಗೆ ಗೌರವ ಫೆಲೋಶಿಪ್‌

Spread the love

ಉಡುಪಿ: ವಿಶ್ವ ಛಾಯಾಗ್ರಹಣ ದಿನದಂದು ಖ್ಯಾತ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರಿಗೆ ಅಮೆರಿಕದ ಇಮೇಜ್‌ ಕಾಲಿಗ್‌ ಸೊಸೈಟಿ ಇಂಟರ್‌ನ್ಯಾಷನಲ್‌ (ICS) ವತಿಯಿಂದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಆನರರಿ ಫೆಲೋಶಿಪ್‌ (Hon.FICS) ಅನ್ನು ಪ್ರದಾನ ಮಾಡಲಾಗಿದೆ.

ಟೋನಿ ಲೀ ಕಿಮ್ ಥುವಾನ್ APSA, Hon.EFIAP, ಕು. ಸಾರಾ ತೈ ಮೇ ಲಿನ್ ARPS ಹಾಗೂ ICS ಗೌರವ ಸಮಿತಿ ಅವರ ನೇತೃತ್ವದಲ್ಲಿ ನೀಡಲಾದ ಈ ಪ್ರಶಸ್ತಿ, ಛಾಯಾಗ್ರಹಣ ಕಲೆ ಹಾಗೂ ಸಂಸ್ಕೃತಿಯ ಅಭಿವೃದ್ಧಿಗೆ, ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಆಸ್ಟ್ರೋ ಮೋಹನ್ ನೀಡಿದ ಅಮೂಲ್ಯ ಕೊಡುಗೆಗಳನ್ನು ಗೌರವಿಸುತ್ತದೆ.

ಕನ್ನಡ ದಿನಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕರಾಗಿರುವ ಆಸ್ಟ್ರೋ ಮೋಹನ್, 1994ರಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಅವರ ವಿಶಿಷ್ಟ ಪ್ರಯೋಗಶೀಲತೆ ಮತ್ತು ನವೀನ ದೃಷ್ಟಿಕೋನದಿಂದ ಗಮನ ಸೆಳೆದಿದ್ದಾರೆ. ಇಂದಿನವರೆಗೆ ಅವರು 850ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರಮುಖ ಪ್ರಶಸ್ತಿಗಳು: ಜುವೆಲ್ಸ್ ಸರ್ಕ್ಯೂಟ್ 2025 ಅಂತಾರಾಷ್ಟ್ರೀಯ ಫೋಟೋ ಸ್ಪರ್ಧೆಯಲ್ಲಿ ಗ್ರಾನ್ ಪ್ರಿಕ್ಸ್ ಝಾಫಿರಿ – ಚಿನ್ನದ ಪದಕ ಅನೇಕ ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿ FIAP ರಿಬನ್‌ ಹಾಗೂ ಜೂರಿ ಪ್ರಶಸ್ತಿ, ಆಂಧ್ರಪ್ರದೇಶ ಫೋಟೋಜರ್ನಲಿಸ್ಟ್ ಅಸೋಸಿಯೇಷನ್ ಹಾಗೂ ಸಮರ್ ಫೋಟೋ ಅವಾರ್ಡ್ಸ್ 2025, 2021ರಲ್ಲಿ ಅವರು ಅಮೆರಿಕದ ಫೋಟೋಗ್ರಾಫಿಕ್‌ ಸೊಸೈಟಿ (PSA)ಯ ಅಸೋಸಿಯೇಟ್‌ಷಿಪ್‌ (APSA) ಗೌರವವನ್ನು ಪಡೆದರು.

ಪ್ರಸ್ತುತ ಅವರು PSA ಯ ಭಾರತದ ಅಸಿಸ್ಟೆಂಟ್ ಕಂಟ್ರಿ ಮೆಂಬರ್ಶಿಪ್​ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕ್ಯಾನನ್ EOS ಮೈಸ್ಟ್ರೋ ಆಗಿಯೂ ಕಾರ್ಯನಿರ್ವಹಿಸುತ್ತಿದ್ದು, ಇಡೀ ಭಾರತದೆಲ್ಲೆಡೆ 20ಕ್ಕೂ ಹೆಚ್ಚು ವರ್ಷಗಳಿಂದ ಯುವ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ