ಆರ್ಟಿಫೀಷಿಯಲ್ ಟೆಕ್ನಾಲಜಿ ಪೊಟೋ ಗ್ರಾಫಿ ಕ್ಷೇತ್ರಕ್ಕೂ ಕಾಲಿಟ್ಟಿದೆ: ರೋಟರಿ ಕಾರ್ಯದರ್ಶಿ ಶಶಿಕಾಂತ ನಾಯಿಕ!!
ಬೆಳಗಾವಿಯಲ್ಲಿ ವಿಶ್ವ ಪೊಟೋ ದಿನಾಚರಣೆ
ಆರ್ಟಿಫೀಷಿಯಲ್ ಟೆಕ್ನಾಲಜಿ ಪೊಟೋ ಗ್ರಾಫಿ ಕ್ಷೇತ್ರಕ್ಕೂ ಕಾಲಿಟ್ಟಿದೆ
ರೋಟರಿ ಕಾರ್ಯದರ್ಶಿ ಶಶಿಕಾಂತ ನಾಯಿಕ ಅಭಿಮತ
ಛಾಯಾಗ್ರಾಹಕರೂ ಕಾಲಕ್ಕೆ ತಕ್ಕಂತೆ ಅಪಗ್ರೆಡ್ ವಾಗಬೇಕು
ಮೊದಲಿಗಿಂತಲೂ ತಂತ್ರಜ್ಞಾನ ಬಹಳಷ್ಟು ಬೆಳೆದಿದ್ದು, ಈಗ ಆರ್ಟಿಫೀಷಿಯಲ್ ಟೆಕ್ನಾಲಜಿ ಪೊಟೋ ಗ್ರಾಫಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಮುಂದಿನ ಪೀಳಿಗೆಗೆ ಉಳಸಿಕೊಂಡು ಹೋಗಬೇಕಾಗಿದೆ ಎಂದು ರೋಟರಿ ಕಾರ್ಯದರ್ಶಿ ಶಶಿಕಾಂತ ನಾಯಿಕ ಹೇಳಿದರು.
ಬೆಳಗಾವಿ ಸಿಟಿ ಹಾಗೂ ಬೆಳಗಾವಿ ತಾಲೂಕಾ ಪೊಟೋ ಮತ್ತು ವಿಡಿಯೋಗ್ರಾಫಿ ಸಂಘದವರು ವಿಶ್ವ ಪೊಟೋ ದಿನಾಚರಣೆ ಅಂಗವಾಗಿ ಸೋಮವಾರ ಬೆಳಗಾವಿಯ ಕ್ಯಾಂಪ್ ನ ಗಣೇಶಪೂರ ರಸ್ತೆಯಲ್ಲಿರುವ ಶಾನಭಾಗ ಹಾಲನಲ್ಲಿ ಎರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಶಿಕಾಂತ ನಾಯಿಕ ಅವರು, ಪೊಟೋ ಗ್ರಾಫಿ ಮುಧ್ರಣ ಮಾಧ್ಯಮಕ್ಕೆ ಸೀಮಿತಗೊಳಸದೆ, ಮುಂದಿನ ಪೀಳಿಗೆಯವರೆಗೆ ಉಳಸಿಕೊಂಡು ಹೋಗಲು ಕಾಲ ಕಾಲಕ್ಕೆ ಬದಲಾಗುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಒಳ್ಳೆಯ ರೀತಿಯಲ್ಲಿ ಪೊಟೋಗಳನ್ನು ಸೇರೆಹಿಡಿಯಬೇಕು ಎಂದರು.
ಇನ್ನು ರಾಜಾ ಕಟ್ಟಿ ಅವರು, ಮೊದಲಿಗಿಂತಲೂ ತಂತ್ರಜ್ಞಾನ ಬಹಳಷ್ಟು ಬೆಳೆದಿದ್ದು, ಈಗ ಆರ್ಟಿಫೀಷಿಯಲ್ ಟೆಕ್ನಾಲಜಿ ನಮ್ಮ ಕ್ಷೇತ್ರಕ್ಕೂ ಕಾಲಿಟ್ಟಿದೆ. ಎ.ಐ ಸದ್ಭಳಕೆಯನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಮಾಡಿಕೊಳ್ಳಲಾಗುತ್ತಿದೆ. ಛಾಯಾಗ್ರಾಹಕರೂ ಕೂಡ ತಮ್ಮ ವ್ಯವಸಾಯವನ್ನು ಕಾಲಕ್ಕೆ ತಕ್ಕಂತೆ ಅಪಗ್ರೆಡ್ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಅಸೋಸಿಯೇಷನ್ ಕೂಡ ಇದಕ್ಕೆ ಅವಕಾಶವನ್ನು ನೀಡಿದ್ದು, ಭವಿಷ್ಯದಲ್ಲಿ ಇದರಲ್ಲಿ ಅಭಿವೃದ್ಧಿಯನ್ನು ಕೈಗೊಳ್ಳಬೇಕೆಂದರು
.
ಸಂಘದ ಅಧ್ಯಕ್ಷ ಡಿ.ಬಿ.ಪಾಟೀಲ, ಕಾರ್ಯದರ್ಶಿ ಸಂಜಯ ಹಿಶೋಭಕರ, ಖಜಾಂಚಿ ನಿತಿನ್ ಮಹಾಳೆ, ಪ್ರತೀಕ್ ಜಾಧವ, ಬಸವರಾಜ ರಾಮನ್ನವರ, ಪ್ರತಾಪ ಜಾಧವ, ಸಂತೋಷ ಪಾಟೀಲ, ಸಚ್ಚೀನ್ ಗೋವೆಕರ್, ರಾಮ ಪ್ರದೇಶಿ, ದೀಪಕ ವಂದರೆ, ವಿನಾಯಕ ಕೋಕಿತ್ಕರ್, ಬಾಳು ಸಂಗೂಕರ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಪೊಟೋ ಮತ್ತು ವಿಡಿಯೋಗ್ರಾಫರಗಳು ಉಪಸ್ಥಿತರಿದ್ದರು.
Laxmi News 24×7