ಶಾಸಕರ ಸರ್ಕಾರಿ ಶಾಲೆಗೆ ಟ್ಯೂಬ್ ಲೈಟ್ಸ್ ವಿತರಿಸಿದ ಲಯನ್ಸ್ ಕ್ಲಬ್ದೇಶದ ಭವಿಷ್ಯಕ್ಕೆ ಮಕ್ಕಳ ಕೊಡುಗೆ ಅಪಾರ
ಖಾನಾಫುರ ಲಯನ್ಸ್ ಕ್ಲಬ್ ಸದಾ ಸಮಾಜ ಸೇವೆಯಲ್ಲಿ ಮುಂಚುಣಿ
ವಿದ್ಯಾಭ್ಯಾಸಕ್ಕೆ ಬೆಳಕಿನ ಬೆಂಬಲಸಾಮಾಜಿಕ ಸೇವೆಯಲ್ಲಿ ಲಯನ್ಸ್ ಕ್ಲಬ್ ಮತ್ತೊಂದು ಹೆಜ್ಜೆ
ಖಾನಾಪೂರ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಓದಿಗೆ ಅಗತ್ಯವಾದ ಬೆಳಕಿನ ಕೊರತೆಯನ್ನು ನಿವಾರಿಸಲು ಲಯನ್ಸ್ ಕ್ಲಬ್ ಮುಂದಾಗಿದೆ. ವಿದ್ಯಾಭ್ಯಾಸಕ್ಕೆ ಅಡಚಣೆ ಆಗದಂತೆ ಶಾಲೆಗೆ ಹೊಸ ಟ್ಯೂಬ್ ಲೈಟ್ ಗಳನ್ನು ಒದಗಿಸುವ ಕಾರ್ಯ ಕೈಗೊಂಡಿದೆ.
ಖಾನಾಫುರ ಲಯನ್ಸ್ ಕ್ಲಬ್ ಸದಾ ಸಮಾಜ ಸೇವೆಯಲ್ಲಿ ಮುಂಚುಣಿಯಲ್ಲಿ ಇದೆ. ಸಾಮಾಜಿಕ ಕಾರ್ಯಗಳ ಮೂಲಕ ಜನರ ಹಿತಾಸಕ್ತಿ ಕಾಯ್ದುಕೊಳ್ಳುತ್ತಿರುವ ಈ ಸಂಘಟನೆ ಇದೀಗ ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಳಕಿನ ಕಿರಣವಾಗಿದೆ.
ಲಯನ್ಸ್ ಕ್ಲಬ್ ಟ್ಯೂಬ್ ಲೈಟ್ ಗಳನ್ನು ಶಾಲಾ ಶಿಕ್ಷಕರಿಗೆ ಹಸ್ತಾಂತರಿಸುವ ಮೂಲಕ ಮೂಲಭೂತ ಸೌಲಭ್ಯ ಸುಧಾರಣೆಗೆ ಸಹಕಾರ ನೀಡಿ ಮಕ್ಕಳ ಕನಸಿಗೆ ದಾರಿ ದೀಪವಾಗಿದೆ. ಮಕ್ಕಳ ಭವಿಷ್ಯ ಬೆಳಗಲು ಮೊದಲು ಅವರ ಶಾಲೆಗೇ ಬೆಳಕಿರ ಬೇಕು. ಶಾಲೆಗೆ ಸರಿಯಾದ ಮುಲಭೂತ ಸೌಕರ್ಯ ಒದಗಿಸಿದರೆ.ಈ ಒಂದು ಸಣ್ಣ ಪ್ರಯತ್ನದಿಂದ ಅವರ ಓದಿಗೆ ಉತ್ತೇಜನ ಸಿಗಲಿದೆ ಎಂಬ ಆಶಯವನ್ನು ಹೊಂದಿದೆ.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿಕಾಸ್ ಕಲ್ಯಾಣಿ, ರವಿಸಾಗರ ಉಪ್ಪಿನ್, ಮಾಜಿ ಅಧ್ಯಕ್ಷರಾದ ಅಜೀತ್ ಪಾಟೀಲ್ , ಬಸವರಾಜ ಹಮ್ಮನ್ನವರ, ಎಮ್.ಜಿ.ಬೆನ್ನಕಟ್ಟಿ ಸೇರಿದಂತೆ ಖಾನಾಪೂರ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
Laxmi News 24×7