Breaking News

ಖಾನಾಪೂರ ತಾಲೂಕಿನಲ್ಲಿ ಎಲ್ಲಿ ನೋಡಿದರೂ ರಸ್ತೆಯ ಮೇಲೆ ತೆಗ್ಗು ಗುಂಡಿಗಳ ಸಾಮ್ರಾಜ್ಯ

Spread the love

ಖಾನಾಪೂರ ತಾಲೂಕಿನಲ್ಲಿ ಎಲ್ಲಿ ನೋಡಿದರೂ ರಸ್ತೆಯ ಮೇಲೆ ತೆಗ್ಗು ಗುಂಡಿಗಳ ಸಾಮ್ರಾಜ್ಯ ಅದು ಹಳೆಯ ರಸ್ತೆಯಾಗಿರ ಬಹುದು ಇಲ್ಲವಾದರೆ ಒಂದು ತಿಂಗಳ ಹಿಂದಷ್ಟೇ ಮಾಡಿದ ರಸ್ತೆ ಮಾಡಿರಬಹುದು ಒಟ್ಟಿನಲ್ಲಿ ತೆಗ್ಗು, ತೆಗ್ಗು, ತೆಗ್ಗು
 -ಖಾನಾಪೂರ ತಾಲೂಕಿನಲ್ಲಿ ಯಾವ ರಸ್ತೆಯಲ್ಲಿ ನೋಡಿದರೂ ಆ ರಸ್ತೆಯು ತೆಗ್ಗು ಮಯ ವಾತಾವರಣದಲ್ಲಿ ಇರುವುದು ಸಾಮಾನ್ಯ ಆ ರಸ್ತೆ ಹಳೆಯದಾಗಿರಬಹುದು ಅಥವಾ ಹೊಸದಾಗಿ ಒಂದು ತಿಂಗಳ ಹಿಂದಷ್ಟೇ ಮಾಡಿರುವ ರಸ್ತೆಯಾಗಿರ ಬಹುದು ಇಲ್ಲಿನ ಜನತೆಯ ಜೀವಕ್ಕೆ ಯಾವುದೇ ಬೆಲೆಯೇ ಇಲ್ಲ ಎಂಬಂತೆ
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ವರ್ತಿಸುವ ಮೂಲಕ ಸಾಗಿದ್ದಾರೆ ಅತಿ ಹೆಚ್ಚು ಮಳೆಯ ಪ್ರದೇಶ ಖಾನಾಪೂರ ತಾಲೂಕಾ ಮಳೆಯ ಅಬ್ಬರಕ್ಕೆ ಅಲ್ಲಿ ಇಲ್ಲಿ ಸಹಜವೇ ತೆಗ್ಗು ಬಿದ್ದು ರಸ್ತೆ ಹಾಳಾಗುತ್ತವೆ ಆದರೆ ಜೀವ ಕಳೆದುಕೊಳ್ಳುವ ರೀತಿಯಲ್ಲಿ ತೆಗ್ಗು ಗುಂಡಿಗಳು ಬಿದ್ದಿದ್ದಾದರೆ ಇದರ ಕಡೆ ‌ಸ್ವಲ್ಪವಾದರೂ ಗಮನ ಹರಿಸಿ ಜನತೆಗೆ ಮಾನವಿಯತೆ ದೃಷ್ಟಿಯಿಂದ ನೋಡೋವ ಗುಚ್ಚಿಗೆ ಹೋಗಿದೆ ಖಾನಾಪೂರ ಲೋಕೋಪಯೋಗಿ ಇಲಾಖೆಯು
ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಅದರಲ್ಲಿ ಒಂದು ತಿಂಗಳ ಹಿಂದಷ್ಟೇ ಮಾಡಿರುವ ಖಾನಾಪೂರ ಬೀಡಿ ರಸ್ತೆಯ ಡಾಂಬರೀಕರಣ ಕಿತ್ತು ಹೋಗುತ್ತಿದೆ ಕಳಪೆ ಗುಣಮಟ್ಟದ ಕಾಮಗಾರಿಗೆ ಸಾಥ್ ನೀಡಿರುವುದು ಮೇಲೆನ್ನೋಟಕ್ಕೆ ಕಂಡು ಬರುತ್ತದೆ ರುಮೇವಾಡಿ ಕ್ರಾಸ್ ಸ್ವಲ್ಪ ಮುಂದೆ ನಡು ರಸ್ತೆಯಲ್ಲಿ ದೊಡ್ಡ ತೆಗ್ಗು ಬಿದ್ದು ನೀರು ನಿಂತು
ಅಂದಾಜು ಕೂಡಾ ಹಚ್ಚಲಾಗದೆ ಪ್ರವಾಸಿಗರು ಸಂಕಷ್ಟ ಅನುಭವಿಸುತ್ತಿದ್ದಾರೆ ಒಟ್ಟಿನಲ್ಲಿ ಖಾನಾಪೂರ ತಾಲೂಕಿನಲ್ಲಿ ಎಲ್ಲಿ ನೋಡಿದರೂ ರಸ್ತೆಯ ಮೇಲೆ ತೆಗ್ಗು ಗುಂಡಿಗಳ ಸಾಮ್ರಾಜ್ಯ ಇದರ ಕಡೆ ಖಾನಾಪೂರ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ಧೋರಣೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ