Breaking News

ಬೈಕ್ ಮೇಲೆ ಬಂದು ಡಕಾಯತಿ 5 ಜನ ಆರೋಪಿಗಳ ಬಂಧನ ನೇಸರಗಿ ಪೊಲೀಸರ ಕಾರ್ಯಾಚರಣೆ ಬಂಧಿತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ!!

Spread the love

ಬೈಕ್ ಮೇಲೆ ಬಂದು ಡಕಾಯತಿ 5 ಜನ ಆರೋಪಿಗಳ ಬಂಧನ
ನೇಸರಗಿ ಪೊಲೀಸರ ಕಾರ್ಯಾಚರಣೆ ಬಂಧಿತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ!!
ಬೈಕ್ ಮೇಲೆ ಬಂದು ಡಕಾಯತಿ 5 ಜನ ಆರೋಪಿಗಳ ಬಂಧನ
ಚಾಕು ತೋರಿಸಿ ವಸ್ತುಗಳನ್ನು ಕಸಿದುಕೊಂಡು ಪರಾರಿಯಾಗುತ್ತಿದ್ದ ತಂಡ ನೇಸರಗಿ ಪೊಲೀಸರಿಂದ ಕಾರ್ಯಾಚರಣೆ ಎಸ್.ಪಿ ಪ್ರಶಂಸೆ
ಬಂಧಿತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ
ಮೊಟರ್ ಸೈಕಲ್ ಮೇಲೆ ಬಂದು ಜನರಿಂದ ಹಣ ಮತ್ತು ಕೈಯಲ್ಲಿದ್ದ ವಸ್ತುಗಳನ್ನು ಕಸಿದುಕೊಂಡು ಪರಾರಿಯಾಗಿ ಹೋಗುತ್ತಿದ್ದ 5 ಜನ ಆರೋಪಿಗಳ ಹೆಡೆಮೂರಿಯನ್ನು ಪೊಲೀಸರು ಕಟ್ಟಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ
ಮೊಟರ್ ಬೈಕ್ ಮೇಲೆ ಬಂದು ಯಾವ ಉರು ಎಂದು ಚಾಕು ತೋರಿಸಿ 29070 ರೂ ಹಣ ಹಾಗೂ 12000 ಮೌಲ್ಯದ ಒಂದು ಟ್ಯಾಬ್ ಕಸಿದುಕೊಂಡು ಹೋಗಿದ್ದಾರೆಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ರಾಜು ಅಡಿವೇಪ್ಪ ಶಿವಬಸನ್ನವರ ಎಂಬುವರು ನೇಸರಗಿ ಪೊಲೀಸ ಠಾಣೆಗೆ ನೀಡಿದ ದೂರು ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಹಾಗೂ ಹಿರಿಯ ಪೊಲೀಸ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನೇಸರಗಿ ಪಿಐ ಗಜಾನನ ನಾಯ್ಕ ನೇತೃತ್ವದಲ್ಲಿ
ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಈರಪ್ಪ ಮಹಾದೇವ ಪವಾಡಿ, ಪ್ರಶಾಂತ ಉರ್ಪ ಪರ್ಸಾ ರಾಮಚಂದ್ರ ನಾರಿ, ನಿಂಗಪ್ಪ ಉರ್ಪ ಅಜಯ ಅಡಿವೆಪ್ಪ ದೊಡಮನಿ, ರಾಮಪ್ಪ ಉರ್ಪ ರಮೇಶ ಬಾಳಪ್ಪ ಹಳಬನ್ನವರ ಹಾಗೂ ಸದಾನಂದ ಉರ್ಪ ಸದಾಶಿವ ಬಾಳಪ್ಪ ಉದ್ದಾನಾಯ್ಕ ಎಂಬ ಐದು ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ನೇಸರಗಿ ಪೊಲೀಸ ಠಾಣೆಯ ಸಿಬ್ಬಂದಿಗಳ ಕಾರ್ಯಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅಭಿನಂದಿಸಿದ್ದಾರೆ

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ