Breaking News

ಗ್ರಾ.ಪಂ ಚುನಾವಣೆ ಮತದಾನಕ್ಕೂ ಮುನ್ನವೇ ಬ್ಯಾಲೆಟ್ ಪತ್ರಿಕೆ ಲೀಕ್ ಪೇಪರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Spread the love

ಗ್ರಾ.ಪಂ ಚುನಾವಣೆ ಮತದಾನಕ್ಕೂ ಮುನ್ನವೇ ಲೀಕ್​​ ಆಯ್ತು ಬ್ಯಾಲೆಟ್ ಪೇಪರ್

ಬೆಳಗಾವಿ: ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗುವ ಬಗ್ಗೆ ಕೇಳಿದ್ದೇವೆ. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣಾ ಬ್ಯಾಲೆಟ್ ಪತ್ರಿಕೆ ಲೀಕ್ ಆಗಿರುವ ಘಟನೆ ಜಿಲ್ಲೆಯ ದೇಸೂರ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

ಚುನಾವಣಾ ಮತದಾನಕ್ಕೂ ಮುನ್ನವೇ ಚುನಾವಣಾ ಬ್ಯಾಲೆಟ್ ಪತ್ರಿಕೆ ಲೀಕ್ ಆಗಿದ್ದು, ದೇಸೂರ ಗ್ರಾಮ ಪಂಚಾಯತಿಯ ಅಭ್ಯರ್ಥಿಗಳು ತಮಗೆ ನೀಡಿರೋ ಚಿನ್ನೆ ತೋರಿಸಿ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ. ಸದ್ಯ ಲೀಕ್ ಆಗಿರುವ ಬ್ಯಾಲೆಟ್ ಪೇಪರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ಭಾಗವಾಗಿ ದೇಸೂರ್ ಗ್ರಾಮದ ನಾಲ್ಕು ವಾರ್ಡ್​ಗಳಲ್ಲಿ ಚುನಾವಣೆ ನಡೆಯಲಿದೆ. ವಾರ್ಡ್ ನಂಬರ್ 1ರ ಬ್ಯಾಲೆಟ್ ಪತ್ರಿಕೆ ಲೀಕ್ ಆಗಿದ್ದು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣಾ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ