Breaking News

ಬಿರುಗಾಳಿಗೆ ಹಾರಿಹೋದ ಶಾಲೆಯ ಮೇಲ್ಚಾವಣಿ

Spread the love

ಕಾರವಾರ(ಉತ್ತರ ಕನ್ನಡ): ಜೋಯಿಡಾ ತಾಲೂಕಿನಲ್ಲಿ ಬುಧವಾರ ಬಿರುಗಾಳಿ ಸಹಿತ ಮಳೆ ಸುರಿಯಿತು. ಅಖೇತಿ ಗ್ರಾಮ ಪಂಚಾಯತಿ ಪ್ರದೇಶದ ಕರಂಬಳನಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಕಟ್ಟಡದ ಮೇಲ್ಛಾವಣಿ (ಶೀಟ್) ಹಾರಿಹೋಗಿದೆ. 1ರಿಂದ 5ನೇ ತರಗತಿಯವರೆಗಿನ ಶಾಲೆ ಇದಾಗಿದ್ದು, ರಜೆ ನೀಡಿದ್ದರಿಂದ ಸಂಭಾವ್ಯ ಅನಾಹುತ ತಪ್ಪಿದೆ.

ಸಾಮಾನ್ಯವಾಗಿ ಶಾಲಾ ಸಮಯದಲ್ಲಿ ಶಾಲೆಯ ಹೊರಗೆ ಮತ್ತು ಅಂಗಳದಲ್ಲಿ ವಿದ್ಯಾರ್ಥಿಗಳ ಜನಸಂದಣಿ ಇರುತ್ತದೆ. ಪಕ್ಕದಲ್ಲೇ ಅಂಗನವಾಡಿ ಕೇಂದ್ರವೂ ಇದೆ. ಭಾರೀ ಮಳೆಯಿಂದಾಗಿ ಜಿಲ್ಲಾಡಳಿತ ಮಂಗಳವಾರ ರಾತ್ರಿಯೇ ಜೋಯಿಡಾ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿತ್ತು.

ಶಾಲೆಯ ಕಟ್ಟಡಕ್ಕೆ ಸ್ಲ್ಯಾಬ್‌ ಹಾಕಲಾಗಿದೆ. ಮಳೆನೀರು ಸೋರಿಕೆಯಾಗುವ ಸಾಧ್ಯತೆ ಇರುವ ಕಾರಣಕ್ಕೆ ಸ್ಲ್ಯಾಬ್‌ ಮೇಲೆ ಶೀಟ್​ನ ಮೇಲ್ಛಾವಣಿ ಮಾಡಲಾಗಿತ್ತು. ಈ ಛಾವಣಿ ಬಿರುಗಾಳಿಯಿಂದ ಹಾರಿಹೋಗಿ ಶಾಲಾ ಆವರಣದ ಒಳಗೆ ಮತ್ತು ಹೊರಗೆ ಬಿದ್ದಿದೆ. ಬುಧವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿತು. ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಶಾಲೆಯನ್ನು ಮತ್ತೆ ತೆರೆಯಬೇಕೆಂದು ಸ್ಥಳೀಯರಾದ ಕೃಷ್ಣ ಗಾಂವಕರ ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ