Breaking News
Home / ಜಿಲ್ಲೆ / ಬೆಳಗಾವಿ / ರಾಮತೀರ್ಥ ನಗರದ ಬಡಾವಣೆಯನ್ನು ಸರ್ವತೋಮುಖ ಅಭಿವೃಧ್ದಿಗೊಳಿಸುವ ಸಲುವಾಗಿ ನಗರಾಭಿವೃಧ್ದಿ ಇಲಾಖೆಯಿಂದ ರೂ. ೨೯.೩೦ ಕೋಟಿ ರೂ.ಗಳ ವಿಶೇಷ ಅನುದಾನ:ಅನಿಲ ಬೆನಕೆ

ರಾಮತೀರ್ಥ ನಗರದ ಬಡಾವಣೆಯನ್ನು ಸರ್ವತೋಮುಖ ಅಭಿವೃಧ್ದಿಗೊಳಿಸುವ ಸಲುವಾಗಿ ನಗರಾಭಿವೃಧ್ದಿ ಇಲಾಖೆಯಿಂದ ರೂ. ೨೯.೩೦ ಕೋಟಿ ರೂ.ಗಳ ವಿಶೇಷ ಅನುದಾನ:ಅನಿಲ ಬೆನಕೆ

Spread the love

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರಾಮತೀರ್ಥ ನಗರದ ಬಡಾವಣೆಯನ್ನು ಸರ್ವತೋಮುಖ ಅಭಿವೃಧ್ದಿಗೊಳಿಸುವ ಸಲುವಾಗಿ ನಗರಾಭಿವೃಧ್ದಿ ಇಲಾಖೆಯಿಂದ ರೂ. ೨೯.೩೦ ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬೆಳಗಾವಿ ಉತ್ತರ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗಿದ್ದು, ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿಸಿ ಚಾಲನೆ ನೀಡಲಾಗಿದೆ ಎಂದರು.

ಅದರಂತೆಯೇ ರಾಮತೀರ್ಥ ನಗರದಲ್ಲಿನ ಬಡಾವಣೆಗಳಲ್ಲಿ ಆರ್.ಸಿ.ಸಿ ಒಳಚರಂಡಿ ಕಾಮಗಾರಿ, ಆರ್.ಸಿ.ಸಿ ನಾಲಾ ನಿರ್ಮಾಣ, ರಸ್ತೆ ಅಭಿವೃದ್ದಿಗೊಳಿಸುವ ಕಾಮಗಾರಿ, ಅಲಂಕಾರಿಕ ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿ ಹಾಗೂ ಉದ್ಯಾನವನಗಳ ಅಭಿವೃಧ್ದಿಗೊಳಿಸಲು ನಗರಾಭಿವೃಧ್ದಿ ಇಲಾಖೆಯಿಂದ ರೂ. ೨೯.೩೦ ಕೋಟಿಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿಸಿ ಟೆಂಡರ್ ಮಾಡಿಸಲಾಗಿದೆ ಎಂದರು.

ಟೆಂಡರ್ ಮುಗಿದ ತಕ್ಷಣ ಬಡಾವಣೆಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ