Breaking News

ಧರ್ಮ ಮತ್ತು ಹಿಂದೂ ಜಾತಿ ಕಾಲಂ ನಲ್ಲಿ ‘ಗಾಣಿಗ’ ಎಂದು ಬರೆಸಬೇಕು- ಗಾಣಿಗ ಸಮಾಜದ ಸಭೆಯಲ್ಲಿ ತೀರ್ಮಾನ

Spread the love

ಜಾತಿಗಣತಿ : ಧರ್ಮ ಮತ್ತು ಹಿಂದೂ ಜಾತಿ ಕಾಲಂ ನಲ್ಲಿ ‘ಗಾಣಿಗ’ ಎಂದು ಬರೆಸಬೇಕು- ಗಾಣಿಗ ಸಮಾಜದ ಸಭೆಯಲ್ಲಿ ತೀರ್ಮಾನ
ಗಾಣಿಗ ಸಮಾಜದ ಸಭೆಯು ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿತು
ಈ ಸಭೆಯು ಗಾಣಿಗ ಸಮಾಜದ ಗುರು ಪೀಠದ ಗುರುಗಳಾದ ಡಾಕ್ಟರ್ ಶ್ರೀ ಜಯಬಸವಕುಮಾರ ಸ್ವಾಮಿಗಳು ಮತ್ತು ಮಾಜಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ್ ಸವದಿ ಅವರ ನೇತೃತ್ವದಲ್ಲಿ ಜರುಗಿ ಜಾತಿ ಗಣತಿಯಲ್ಲಿ ಏನು ನೋಂದಣಿ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ ಜಾತಿ ಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಹಿಂದು ಜಾತಿಯ ಕಾಲಂ ನಲ್ಲಿ ಗಾಣಿಗ ಎಂದು ಬರೆಸಬೇಕೆಂದು ತಿರ್ಮಾನಿಸಲಾಯಿತ್ತು
ಅದರಂತೆಯೇ ಗಾಣಿಗ ಸಮಾಜದ ಬೃಹತ್ ಸಮಾವೇಶವನ್ನು ಡಿಸೆಂಬರ್ ತಿಂಗಳಲ್ಲಿ ಶ್ರೀ ಮಲ್ಲಿಕಾರ್ಜುನ ಲೋಣಿಯವರ ನೇತೃತ್ವದಲ್ಲಿ ನಡೆಸಲು ನಿರ್ಧರಿಸಲಾಯಿತು ಅದರಂತೆ ಮುಂದಿನ ಸಭೆಯಲ್ಲಿ ಅಖಿಲ ಭಾರತ ಗಾಣಿಗ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ನಡೆಸುವುದು ನಿರ್ಧರಿಸಲಾಯಿತು
ಈ ಸಂದರ್ಭದಲ್ಲಿ ಖಾನಾಪೂರ ತಾಲೂಕಾ ಗಾಣಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಅಡಿವೆಪ್ಪ ಕೋಟಿ ಅವರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದರು ಗಂಗಾಧರ ಮಡ್ಡಿಮನಿ ಸೇರಿದಂತೆ ಕರ್ನಾಟಕದ ರಾಜ್ಯದಿಂದ ಬಂದಂತಹ ಗಾಣಿಗ ಸಮಾಜದ ಬಾಂಧವರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ