Breaking News

ಮುಧೋಳ ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ ಗೋಲ್ ಮಾಲ್ !!??

Spread the love

ಮುಧೋಳ ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ ಗೋಲ್ ಮಾಲ್ !!??
ಕಾರ್ಮಿಕರಿಲ್ಲದೇ…ಮಷೀನ್ ಬಳಸಿ ಕೆಲಸ…ಸರ್ಕಾರದ ಕಣ್ಣಿಗೆ ಮಣ್ಣೆರೆಚಿದ್ರಾ ಅಧಿಕಾರಿಗಳು!!!
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಗುಲಗಾಲ‌ಜಂಬಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗೋಲ್’ಮಾಲ್ ನಡೆದಿರುವ ಆರೋಪ ಕೇಳಿ ಬಂದಿದೆ.
ನರೇಗಾ ಕೆಲಸಕ್ಕೆ ಯಂತ್ರೋಪಕರಣಗಳ ಬಳಕೆ ಮಾಡಲಾಗಿದ್ದು,. ಗ್ರಾಮೀಣ ಜನರಿಗೆ ಜೀವನಭದ್ರತೆ ಒದಗಿಸುವ ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ಕಾರ್ಮಿಕರಿಗೆ ಕೆಲಸ ನೀಡುವ ಬದಲಿಗೆ ಯಂತ್ರೋಪಕರಣ ಬಳಕೆ ಮಾಡಿ ಎರಡು ಹಳ್ಳಗಳಲ್ಲಿನ ಹೂಳೆತ್ತಿರುವ ಆರೋಪ ಕೇಳಿ ಬಂದಿದೆ.
ಅಲ್ಲದೇ ನರೇಗಾ ವೆಬ್ ಸೈಟಿಗೆ ಕೂಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನಾಮಕಾವಸ್ಥೆ ಫೋಟೊ‌ ಕೂಡ ಅಪ್ ಲೋಡ್ ಮಾಡಲಾಗಿದೆ. ಅಧಿಕಾರಿಗಳಿಂದ ಸರ್ಕಾರದ‌ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಲಾಗಿದ್ದು, ಒಂದೇ ಫೋಟೊವನ್ನು ಮೂರ್ನಾಲ್ಕು ಎನ್ಎಂಆರ್ ಶೀಟಿಗೆ ಅಪ್ ಲೋಡ್ ಮಾಡಲಾಗಿದೆ.
ಎರಡು ಕಾಮಗಾರಿಯಡಿ ನಿತ್ಯ 60 ಜನ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿರುವುದಾಗಿ ಖೊಟ್ಟಿ ದಾಖಲೆ ಸೃಷ್ಟಿಸಲಾಗಿದೆ. ಅಪ್ ಲೋಡ್ ಮಾಡಿದ ಅರ್ಧಗಂಟೆಯಲ್ಲೆ ಕಾರ್ಮಿಕರು ಮಾಯವಾಗಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ