Breaking News

3 ದಿನ ಹಿಂದೆ ಮೃತಪಟ್ಟ ಮರಿ ಆನೆ ಜೊತೆ ಅಲೆದಾಡುತ್ತಿರುವ ತಾಯಿ ಆನೆ

Spread the love

3 ದಿನ ಹಿಂದೆ ಮೃತಪಟ್ಟ ಮರಿ ಆನೆ ಜೊತೆ ಅಲೆದಾಡುತ್ತಿರುವ ತಾಯಿ ಆನೆ

ಹಾಸನ: ಆನೆಗಳು ತಮ್ಮ ಮರಿಗಳ ಬಗ್ಗೆ ಅದೆಷ್ಟು ಪ್ರೀತಿ ಹೊಂದಿರುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮರಿ ಆನೆ ಮೃತಪಟ್ಟು ಮೂರು ದಿನ ಕಳೆದಿದೆ. ಆದರೆ, ಇದನ್ನು ತಿಳಿಯದ ತಾಯಿ ಆನೆ ತನ್ನ ಮರಿಯ ಕಳೆಬರಹವನ್ನು ತಾನು ಹೋದ ಕಡೆಗೆಲ್ಲಾ ಎಳೆದುಕೊಂಡು ಹೋಗುತ್ತಿದೆ.

ಈ ಘಟನೆ ನಡೆದಿದ್ದು, ಹಾಸನದ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ ಜಾಕನನಳ್ಳಿ ಎಸ್ಟೇಟ್ ಬಳಿ. ತಾಯಿ ಆನೆಯು ಮೃತಪಟ್ಟ ಮರಿ ಆನೆಯನ್ನು ಎಳೆದುಕೊಂಡು ಹೋಗುವ ದೃಶ್ಯ ಮನಕಲಕುವಂತಿದೆ.

ಘಟನೆ ಹಿನ್ನೆಲೆ: ಕಳೆದ ಶನಿವಾರ ಗರ್ಭಿಣಿ ಆನೆಯು ಮರಿಗೆ ಜನ್ಮ ನೀಡಿದೆ. ಆದರೆ, ಅದು ಹುಟ್ಟುವ ವೇಳೆ ಸ್ಥಳದಲ್ಲೇ ಮೃತಪಟ್ಟಿದೆ. ತಾಯಿ ಆನೆ ತನ್ನ ಮರಿ ಜೀವಂತವಾಗಿದೆ ಎಂದು ತಿಳಿದು ಕಾಲಿನಿಂದ ಒದ್ದು ಬದುಕಿಸುವ ಪ್ರಯತ್ನ ಮಾಡಿದರೂ ಸಹ ಮರಿ ಆನೆ ಎದ್ದಿಲ್ಲ.

ಆದಾಗ್ಯೂ, ತಾಯಿ ಆನೆ ತನ್ನ ಮರಿಯನ್ನು ತನ್ನೊಂದಿಗೆ ಎಳೆದುಕೊಂಡು ಹೋಗುತ್ತಿದೆ. ಈ ಹೃದಯವಿದ್ರಾವಕ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಜಿಲ್ಲೆಯಲ್ಲಿ ಜೋರು ಮಳೆ ಸುರಿಯುತ್ತಿದೆ. ಮಳೆಯ ನಡುವೆಯೇ ಮೃತಪಟ್ಟ ಮರಿಯನ್ನು ತಾಯಿ ಆನೆ ಎಳೆದುಕೊಂಡು ಹೋಗುತ್ತಿದೆ.ತನ್ನ ಕರುಳ ಕುಡಿ ಇನ್ನೂ ಬದುಕಿದೆ ಎಂದು ತಿಳಿದಿರುವ ಮಾತೃ ಹೃದಯ ಯಾರನ್ನೂ ಕೂಡ ಹತ್ತಿರ ಹೋಗಲು ಬಿಡುತ್ತಿಲ್ಲ. ಭಾನುವಾರವಷ್ಟೇ ಅರೇಹಳ್ಳಿ ಸಮೀಪದ ಕೆಸಗುಲಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮರಿಯೊಂದಿಗೆ ತಾಯಿಯಾನೆ ಮೃತಪಟ್ಟಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಮರಿ ಆನೆ ಮೃತಪಟ್ಟಿರುವುದು ಪ್ರಾಣಿ ಪ್ರಿಯರಿಗೆ ಅತೀವ ನೋವನ್ನುಂಟುಮಾಡಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ