Breaking News
Home / Uncategorized / ಕರ್ನಾಟಕ ರಾಜ್ಯ ವೀರಶೈವ -ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪರಮಶಿವಯ್ಯ ಅವರನ್ನು ಹುಕ್ಕೇರಿ ಹಿರೇಮಠದಿಂದ ಬೆಂಗಳೂರು ಮಹಾನಗರದಲ್ಲಿ ಸತ್ಕರಿಸಲಾಯಿತು.

ಕರ್ನಾಟಕ ರಾಜ್ಯ ವೀರಶೈವ -ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪರಮಶಿವಯ್ಯ ಅವರನ್ನು ಹುಕ್ಕೇರಿ ಹಿರೇಮಠದಿಂದ ಬೆಂಗಳೂರು ಮಹಾನಗರದಲ್ಲಿ ಸತ್ಕರಿಸಲಾಯಿತು.

Spread the love

ಬೆಂಗಳೂರು – ಕರ್ನಾಟಕ ರಾಜ್ಯ ವೀರಶೈವ -ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪರಮಶಿವಯ್ಯ ಅವರನ್ನು ಹುಕ್ಕೇರಿ ಹಿರೇಮಠದಿಂದ ಬೆಂಗಳೂರು ಮಹಾನಗರದಲ್ಲಿ ಸತ್ಕರಿಸಲಾಯಿತು.
  ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪರಮಶಿವಯ್ಯ ಇವರನ್ನು ಬೆಂಗಳೂರು ಮಹಾನಗರದಲ್ಲಿ ಹುಕ್ಕೇರಿ ಹಿರೇಮಠದ ವತಿಯಿಂದ ಶ್ರೀ ಷ ಬ್ರ ಡಾಕ್ಟರ್ ಮಲಯ ಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಶಿವಗಂಗಾ ಕ್ಷೇತ್ರ ಇವರ ದಿವ್ಯಸಾನಿಧ್ಯದಲ್ಲಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಮಂಜುನಾಥ್ ಅವರು ಮತ್ತು ಮಹೇಶ್ ಅವರು ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪರಮಶಿವಯ್ಯ, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಯಡಿಯೂರಪ್ಪನವರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಗುರುಹಿರಿಯರ ಆಶೀರ್ವಾದದಿಂದ ವೀರಶೈವ-ಲಿಂಗಾಯತ ಅಭಿವೃದ್ಧಿಯನ್ನು ನಿರಂತರವಾಗಿ ಮಾಡುತ್ತೇವೆ. ಹಾಗೆಯೇ ಬಹುದೂರದಿಂದ ಆಗಮಿಸಿ ಸನ್ಮಾನಿಸಿ ನಮ್ಮ ಜವಾಬ್ದಾರಿಯನ್ನು ಶ್ರೀಗಳು ಹೆಚ್ಚಿಸಿದ್ದಾರೆ ಎಂದರು.
ಶಿವಗಂಗಾ ಕ್ಷೇತ್ರದ ಮಲಯ ಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಹಿರಿಯರಾದ ಪರಮಶಿವಯ್ಯನವರನ್ನು ಇಡೀ ವೀರಶೈವ ಲಿಂಗಾಯತ ಸಮುದಾಯ ಗೌರವಿಸುತ್ತಾ ಬಂದಿದೆ. ಅದರ ಪ್ರತಿಫಲವಾಗಿ ಇವತ್ತು ಅವರು ಅಧ್ಯಕ್ಷರಾಗಿದ್ದಾರೆ. ಇವರಿಂದ ಇನ್ನೂ ಹೆಚ್ಚಿನ ಕಾರ್ಯವಾಗಲಿ ಎಂದು ಆಶಯವನ್ನು ವ್ಯಕ್ತಪಡಿಸಿದರು.
ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಶ್ರೀ ವೀರಶೈವ ಲಿಂಗಾಯತ ಇದು ಇಡೀ ವಿಶ್ವಕ್ಕೆ ಮಾದರಿ ಆಗಿರುವಂತಹ ಧರ್ಮ. ಧರ್ಮದಲ್ಲಿ ಇರುವ ಜನಗಳು ತುಂಬಾ ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯಹಸ್ತವನ್ನು ಪರಮಶಿವಯ್ಯನವರ ಚಾಚಲಿ ಎಂದರು

Spread the love

About Laxminews 24x7

Check Also

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Spread the love ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯುವ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ