Breaking News

ಎರಡುವರೆ ವರ್ಷಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿಕೊಂಡ ಕುಡಚಿಯ ಪುಟ್ಟ ಪೋರ ವಿಹಾನ್….

Spread the love

ಎರಡುವರೆ ವರ್ಷಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿಕೊಂಡ ಕುಡಚಿಯ ಪುಟ್ಟ ಪೋರ ವಿಹಾನ್….
ಪ್ರಪಂಚದ ಬಗ್ಗೆ ಏನೊಂದೂ ಅರಿಯದ ಪುಟಾಣಿಯೊಬ್ಬ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಳ್ಳುವುದು ಸಾಮಾನ್ಯ ಸಾಧನೆಯಲ್ಲ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ….
ರಾಯಬಾಗ ತಾಲೂಕಿನ ಕುಡಚಿ ಗ್ರಾಮೀಣ ಭಾಗದ ಟಿಕನಾಳ ತೋಟದ ನಿವಾಸಿ
ಡಾ. ಅಜೀತ ಕೋಳಿಗುಡ್ಡ ಹಾಗೂ ಡಾ. ವಂದನಾ ಅಜೀತ್ ಕೋಳಿಗುಡ್ಡ ದಂಪತಿಗಳ ಮುದ್ದಿನ ಸುಪುತ್ರ ಈ ಎರಡು ವರ್ಷ ನಾಲ್ಕು ತಿಂಗಳ ಪ್ರಾಯದ ವಿಹಾನ ಅಜೀತ ಕೋಳಿಗುಡ್ಡ ನ ನೆನಪಿನ ಶಕ್ತಿ ಅಗಾಧವಾದುದು, ವಾರದ ಹೆಸರು, ತಿಂಗಳ ಹೆಸರು, ಚಿತ್ರ ನೋಡಿ ವಿವಿಧ ಪ್ರಾಣಿಗಳ ಹೆಸರು, ವಿವಿಧ ಪಕ್ಷಿಗಳ ಹೆಸರು, ಹಣ್ಣುಗಳ ಹೆಸರು , ತರಕಾರಿಗಳ ಹೆಸರು,ವಾಹನಗಳ ಹೆಸರು, ವಿವಿದ ರೀತಿಯ ವೃತ್ತಿಗಳ ಹೆಸರು, ಬಣ್ಣಗಳು ,ಕನ್ನಡ ವರ್ಣಮಾಲೆಗಳನ್ನು ಹೇಳುವುದು,
ವಿವಿಧ ವಿಜ್ಞಾನಿಗಳ ಹೆಸರು,ವೈದ್ಯಕೀಯ ಉಪಕರಣಗಳನ್ನು ಗುರುತಿಸುವುದು, ಔಷಧಿಗಳನ್ನು ಗುರುತಿಸುವುದು ಮುಂತಾದ ವಿಷಯ ಕರಗತ ಮಾಡಿಕೊಂಡಿದ್ದರಿಂದ ಇದೀಗ ಈ ಬಾಲಕನ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆಯಾಗಿದೆ.ಸಾಧನೆ ಮೂಲಕ ಕುಡಚಿಗೆ ಹೆಮ್ಮೆ ತಂದಿರುವ ವಿಹಾನ್ ನನ್ನು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ