Breaking News

ಅಂತರರಾಜ್ಯ ಕಳ್ಳನ ಬಂಧನ : 14.71 ಲಕ್ಷ ಮೌಲ್ಯದ ಮೊಬೈಲ್, ಕಾರು ವಶಕ್ಕೆ

Spread the love

ಅಂತರರಾಜ್ಯ ಕಳ್ಳನ ಬಂಧನ : 14.71 ಲಕ್ಷ ಮೌಲ್ಯದ ಮೊಬೈಲ್, ಕಾರು ವಶಕ್ಕೆ
ಸಂಕೇಶ್ವರ : ಅಂತರರಾಜ್ಯ ಕಳ್ಳನೋರ್ವನನ್ನು ಬಂಧಿಸಿರುವ ಸಂಕೇಶ್ವರ ಪೊಲೀಸರು ಬಂಧಿತನಿಂದ 14.71 ಲಕ್ಷ ಮೌಲ್ಯದ 101 ವಿವಿಧ ಕಂಪನಿಯ ಮೊಬೈಲ್ ಹಾಗೂ ಒಂದು ಕಾರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಖದೀಮನನ್ನು ತೆಲಂಗಾಣ ರಾಜ್ಯದ ನಿಜಾಮಾಬಾದ ಜಿಲ್ಲೆಯ ಬಾಣಸವಾಡದ ನವೀನ ಸಂಪತ ಎಂಬುವ ಈ ಮೊಬೈಲ್ ಕಳ್ಳತನ ಪ್ರಕರಣ ದಲ್ಲಿ ಬಂಧಿತ ವ್ಯಕ್ತಿಯಾಗಿದ್ದಾನೆ.
ಸಂಕೇಶ್ವರ ಪೋಲಿಸರು ಹಿರಣ್ಯಕೇಶಿ‌ ಕಾರಖಾನೆ ಬಳಿಯಲ್ಲಿ ವಾಹನಗಳ ತಪಾಸನೆ ಮಾಡುವ ಸಂದರ್ಭದಲ್ಲಿ ಈ ಖದೀಮ ತೆಗೆದುಕೊಂಡು ಹೋಗುತ್ತಿದ್ದ ಕಾರಿನಲ್ಲಿ ವಿವಿಧ ಕಂಪನಿಯ ಮೊಬೈಲ್ ಗಳು ಪತ್ತೆಯಾಗಿವೆ. ಬಳಿಕ ಬಂಧಿನನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದಾಗ ಬಂಧಿತನ ಬಳಿ ಇದ್ದ 11.71 ಲಕ್ಷ ಮೌಲ್ಯದ 101 ಮೊಬೈಲ್ ಗಳು ಹಾಗೂ 3 ಲಕ್ಷ ಮೌಲ್ಯದ ಹುಂಡಾ ಕಂಪನಿಯ ಕಾರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆ ಗೋಕಾಕ ಡಿಎಸ್ ಪಿ ರವಿ ನಾಯಕ ಹಾಗೂ ಸಂಕೇಶ್ವರ ಸಿಪಿಐ ಶಿವಶರಣ ಅವಜಿ ಅವ ಮಾರ್ಗದರ್ಶನ ದಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ
ಪಿಎಸ್ ಐ ( ಕಾ,ಸು) ಆರ್.ಎಸ್. ಖೋತ, ಪಿ.ಎಸ್.ಐ(ಅ.ವಿ) ಎ.ಕೆ.ಸೊನ್ನದ, ಸಿಬ್ಬಂದಿಗಳಾದ ಎಸ್.ಎಲ್.ಗಳತಗಿ ಸಿಎಚ್‌ಸಿ-2525, ಎಸ್.ಎ.ಕಾಂಬಳೆ ಸಿಎಚ್‌ಸಿ-2233, ವಿ.ಬಿ.ಮುರಕಿಭಾವಿ ಸಿಎಚ್‌ಸಿ-3948, ಎಸ್.ಎಮ್.ಯಕ್ಸಂಬಿ ಸಿಎಚ್‌ಸಿ-2558, ಬಿ.ಟಿ.ಪಾಟೀಲ ಸಿಪಿಸಿ-2790 ಇವರಿಗೆ ಬೆಳಗಾವಿಯ ಎಸ್.ಪಿ ಭೀಮಾಶಂಕರ ಗುಳೇದ ಅವರು ಉತ್ತಮ ಕಾರ್ಯಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿ ಪ್ರಶಂಸಿರುತ್ತಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ