Breaking News

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಥೈಲ್ಯಾಂಡ್ ಮೂಲದ ಸುಂದರಿ ಈ ಬಾರಿಯ ಮಿಸ್ ವರ್ಲ್ಡ್-2025

Spread the love

ಹೈದರಾಬಾದ್‌ನಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಥೈಲ್ಯಾಂಡ್ ಮೂಲದ ಸುಂದರಿ ಈ ಬಾರಿಯ ಮಿಸ್ ವರ್ಲ್ಡ್-2025 ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ಗೆದ್ದ ವಿಶ್ವ ಸುಂದರಿಗೆ ಚಿನ್ನದಿಂದ ಮಾಡಿದ ವಜ್ರ ಖಚಿತ ಕೀರಿತವನ್ನು ತೊಡಿಸಲಾಗುತ್ತದೆ.ಈ ಪ್ರತಿಷ್ಠಿತ ಮಿಸ್ ವರ್ಲ್ಡ್ ಕಿರೀಟ ಹಿಂದಿನ ಯಾವುದೇ ಕಿರೀಟಕ್ಕಿಂತ ಭಿನ್ನವಾಗಿದೆ.175.49 ಕ್ಯಾರೆಟ್‌ಗಳ 1,770 ವಜ್ರಗಳಿಂದ ಮಾಡಿದ, 18 ಕ್ಯಾರೆಟ್ ಬಿಳಿ ಚಿನ್ನದಲ್ಲಿ ಹೊಂದಿಸಲಾಗಿದೆ.

ಈ ಕಿರೀಟದ ಮೌಲ್ಯ ಸುಮಾರು ಮೂರು ಕೋಟಿ ರೂಪಾಯಿ ಎನ್ನಲಾಗುತ್ತದೆ. ಇದರ ಜೊತೆಗೆ ವಿಜೇತೆ ಓಪಲ್ ಸುಚಾತ ಬರೋಬ್ಬರಿ 8.5 ಕೋಟಿ ರೂಪಾಯಿ ನಗದು ಬಹುಮಾನವನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ವಿಶ್ವ ಸುಂದರಿ-2025 ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ನಂದಿನಿ ಗುಪ್ತಾ ಟಾಪ್-8 ರಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ರಾಜಸ್ಥಾನದ ಕೋಟಾದ 22 ವರ್ಷದ ನಂದಿನಿ ಗುಪ್ತಾ ಭಾರತವನ್ನು ಪ್ರತಿನಿಧಿಸಿದ್ದರು. ಭಂಡಾಹೆರಾ ಗ್ರಾಮದಲ್ಲಿ 200 ಬಿಘಾ ಭೂಮಿಯನ್ನು ಹೊಂದಿರುವ ರೈತನ ಮಗಳಾದ ನಂದಿನಿ 2023 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದು ಖ್ಯಾತಿ ಪಡೆದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ