Breaking News

ಡಾ. ಸಿ.ಕೆ. ಜೋರಾಪೂರ ವಿರಚಿತ ಶ್ರೀ ರಾಮ ಮಂದಿರದ ಹೋರಾಟಗಳು ಹಾಗೂ ರಾಮಾಯಣ ಗ್ರಂಥದ ಬಿಡುಗಡೆ ಡಾ. ಸಿ.ಕೆ. ಜೋರಾಪೂರ ವಿರಚಿತ

Spread the love

ಡಾ. ಸಿ.ಕೆ. ಜೋರಾಪೂರ ವಿರಚಿತ ಶ್ರೀ ರಾಮ ಮಂದಿರದ ಹೋರಾಟಗಳು ಹಾಗೂ ರಾಮಾಯಣ ಗ್ರಂಥದ ಬಿಡುಗಡೆ
ಡಾ. ಸಿ.ಕೆ. ಜೋರಾಪೂರ ವಿರಚಿತ
ಶ್ರೀ ರಾಮ ಮಂದಿರದ ಹೋರಾಟಗಳು ಹಾಗೂ
ರಾಮಾಯಣ ಗ್ರಂಥದ ಬಿಡುಗಡೆ
ವಿವಿಧ ಗಣ್ಯರಿಂದ ಜೋರಾಪುರ ಅವರ ಕಾರ್ಯಕ್ಕೆ ಮೆಚ್ಚುಗೆ
ಡಾ. ಸಿ.ಕೆ. ಜೋರಾಪೂರ ವಿರಚಿತ ಶ್ರೀ ರಾಮ ಮಂದಿರದ ಹೋರಾಟಗಳು ಹಾಗೂ ರಾಮಾಯಣ ಗ್ರಂಥದ ಬಿಡುಗಡೆ ಸಮಾರಂಭವು ಅತ್ಯಂತ ಉತ್ಸಾಹದಲ್ಲಿ ನೆರವೇರಿತು.
ಗುರುವಾರದಂದು ಬೆಳಗಾವಿಯ ಕನ್ನಡ ಭವನದಲ್ಲಿ ಗುರುಸಿದ್ಧಸ್ವಾಮಿಜೀಗಳದಿವ್ಯಸಾನಿಧ್ಯದಲ್ಲಿ ಹಾಗೂ ಡಾ. ಎಚ್.ಬಿ. ರಾಜಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅರವಿಂದ ದೇಶಪಾಂಡೆ, ಪ್ರಮೋದಾಚಾರ್ಯಕಟ್ಟಿ, ಗೋವಿಂದಪ್ಪ ಗೌಡಪ್ಪಗೋಳ. ಕೃಷ್ಣ ಭಟ್, ಗೀತಾ ಸುತಾರ್ ಇನ್ನುಳಿದವರು ಉಪಸ್ಥಿತರಿದ್ಧರು. ಗಣ್ಯರ ಹಸ್ತದಿಂದ ಡಾ. ಸಿ.ಕೆ. ಜೋರಾಪೂರ ವಿರಚಿತ ಶ್ರೀ ರಾಮ ಮಂದಿರದ ಹೋರಾಟಗಳು ಹಾಗೂ ರಾಮಾಯಣ ಗ್ರಂಥದ ಬಿಡುಗಡೆ ಸಮಾರಂಭವು ಅತ್ಯಂತ ಉತ್ಸಾಹದಲ್ಲಿ ನೆರವೇರಿತು. 
ಈ ಸಂದರ್ಭದಲ್ಲಿ ಗೋವಿಂದಪ್ಪ ಗೌಡಪ್ಪಗೋಳ ಅವರು,ಭಾರತವು ಅಸಂಖ್ಯಾತ ರಾಷ್ಟ್ರಭಕ್ತರ ಕರ್ಮಭೂಮಿ. ಈ ಪಾವನ ಭೂಮಿಯ ಭವ್ಯ ಪರಂಪರೆಗೆ ದಿವ್ಯ ಚರಿತ್ರೆಗೆ ಸದಾಕಾಲಕ್ಕೂ ಉನ್ನತ ಚಿಂತನ ಮಂಥನಕ್ಕೆ ಸದಾ ದಾರಿಯನ್ನು ತೋರಿಸುವ ಗ್ರಂಥ ರಾಮಾಯಣ. ಕಳೆದ 7 ಸಾವಿರ ವರ್ಷಗಳಿಂದ ಮನುಕುಲಕ್ಕೆ ಮಾರ್ಗದರ್ಶನ ಮಾಡುತ್ತ, ಸಾರ್ಥಕ ಬದುಕಿನ ಸೂತ್ರಗಳನ್ನು ರಾಮಾಯಣವು ಸಾರಿದೆ. ಇನ್ನು ರಾಮಮಂದಿರದ ಹೋರಾಟದ ಹಾದಿಯನ್ನು ಸೂಕ್ತ ಅಧ್ಯಯನ ಮಾಡಿ ಸಿ.ಕೆ. ಜೋರಾಪುರ ಅವರು ಹೊರ ತಂದಿದ್ದಾರೆ. ಅವರ ಕೃತಿಗಳು ಅಮೋಘ. ನಿಜವಾದ ಇತಿಹಾಸ ಸಂಶೋಧಕರು ಎಂದರು.
ಸರ್ಕಾರದ ಕೃತಿ ಆಯ್ಕೆ ಮತ್ತು ಖರೀದಿ ಹಾಗೂ ಮಾರಾಟ ಸಮಿತಿಯ ವಿಳಂಬ ನೀತಿಗೆ ಅವರು ವಿಷಾದ ವ್ಯಕ್ತಪಡಿಸಿದರು. ಲೇಖಕರು ಮತ್ತು ಸಾಹಿತಿಗಳ ಪರಿಸ್ಥಿತಿ ದಯನೀಯವಾಗಿದೆ. ಸರ್ಕಾರ ಆಯ್ಕೆಯೂ ಮಾಡುತ್ತಿಲ್ಲ. ಸಮಿತಿಯೂ ಸಮರ್ಥವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಲ್.ಎಸ್. ಶಾಸ್ತ್ರಿ, ಹನುಮಂತ ಕೊಂಗಾಲಿ, ಸುರೇಶ ಯಾದವ್, ವ್ಹಿ.ಕೆ. ಬಡಿಗೇರ್, ಡಾ. ಶಿವು ನಂದಗಾಂವಿ, ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು. ಬಸವರಾಜ್ ಕುಪ್ಪಸಗೌಡರ ನಿರೂಪಿಸಿದರು, ಕೊನೆಯಲ್ಲಿ ಆರ್.ಪಿ. ಪಾಟೀಲ್ ವಂದಿಸಿದರು

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ