ನವದೆಹಲಿ: ಆಪರೇಶನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯಲಲಿ ನೂರಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ.
ಉಗ್ರರ ವಿರುದ್ಧ ಭಾರತೀಯ ಸೇನಾ ಕಾರ್ಯಾಚರಣೆ ಕುರಿತು ಮಾಹಿತಿ ನೀಡಲು ಬೆಳಿಗ್ಗೆ 10 ಕ್ಕೆ ರಕ್ಷಣಾ ಹಾಗೂ ವಿದೇಶಾಂಗ ಇಲಾಖೆ ಮಹತ್ವದ ಸುದ್ದಿಗೋಷ್ಟಿ ಕರೆದಿದೆ.
ಆಪರೇಶನ್ ಸಿಂಧೂರ್ ಹೆಸರಿನಲ್ಲಿ ಭಾರತ ಸೇನೆ ಕಾರ್ಯಾಚರಣೆ ಆರಂಭಿಸಿದ್ದು, ಮೂರು ಉಗ್ರ ಸಂಘಟನೆಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ಜೈಶ್ ಎ ಮೊಹ್ಮದ್ ಉಗ್ರನ ನೆಲೆಯಾಗಿದ್ದ ಸುಬಾನ್ ಅಲ್ಲಾ ಮಸೀದಿ ಮೇಲೆ ಸಹ ದಾಳಿ ಮಾಡಲಾಗಿದೆ.
ಭಾರತದ ದಾಳಿಗೆ ಪಾಕಿಸ್ತಾನ ತತ್ತರಿಸಿದೆ. ಪಾಕಿಸ್ತಾನ ಪದೆ ಪದೆ ಇನಿಯಂತ್ರಿತ ದಾಳಿ ನಡೆಸುತ್ತಿದೆ ಎಂದು ಭಾರತ ಆರೋಪಿಸಿದೆ. ಈಗಾಗಾಲೆ ಕಾಶ್ಮೀರದಲ್ಲಿ 3 ನಾಗರಿಕರು ಪಾಕಿಸ್ತಾನದ ದಾಳಿಗೆ ತುತ್ತಾಗಿದ್ದಾಗಿ ಮಾಹಿತಿ ಸಿಕ್ಕಿದೆ. ಎಲ್ಒಸಿ ಉದ್ದಕ್ಕೂ ಪಾಕಿಸ್ತಾನ ಅನಿಯಂತ್ರಿತ ದಾಳಿ ನಡೆಸುತ್ತಿದೆ.ಈ ಮಧ್ಯೆ ಭಾರತೀಯ ಸೇನೆ ಶ್ರೀನಗರ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ಪಡೆದಿದೆ.