Breaking News

ಉಗ್ರರ ನೆಲೆಗಳ ಮೇಲೆ ನಡೆಸಿದ ಸೇನಾ ದಾಳಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ವಿಜಯೋತ್ಸವ

Spread the love

ಜಮ್ಮು ಕಾಶ್ಮೀರದ ಪೆಹಲ್ಗಾಮ್’ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಮಾಡಿದ ಉಗ್ರರ ದಾಳಿಯ
ಪ್ರತಿಕಾರವಾಗಿ, ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರ ನೆಲೆಗಳ ಮೇಲೆ ನಡೆಸಿದ ಸೇನಾ ದಾಳಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ವಿಜಯೋತ್ಸವ ಆಚರಿಸಿ, ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಲು ಆಗ್ರಹಿಸಿದರು.
ಈ ವೇಳೆ ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ, ನರೇಂದ್ರ ಮೋದಿ ನೇತೃತ್ವದಲ್ಲಿ ಆಪರೇಷನ್ ಸಿಂಧೂರ ಮೂಲಕ ಅರ್ಥಗರ್ಭಿತವಾದ ಕೆಲಸ ಮಾಡಲಾಗಿದೆ. ಈ ಮೂಲಕ ಯುದ್ದ ಪ್ರಾರಂಭವಾಗಿದೆ ಎಂದರು.
ದೇಶದ ಜನರು ಪ್ರತಿಕಾರಕ್ಕೆ ಕಾಯತ್ತಾ ಇದ್ದರು, ಅದರಂತೆ ಸೇನೆ 9 ಕಡೆಗೆ ದಾಳಿ ಮಾಡಿದೆ, ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೈನಿಕರಿಗೆ ಮುಕ್ತ ಅವಕಾಶ ಕೊಟ್ಟಂತಹ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.‌
ಈ ಪ್ರತಿಕಾರ ಇಷ್ಟಕ್ಕೆ ನಿಲ್ಲಬಾರದು, ಪಾಕಿಸ್ತಾನ ಸೈನಿಕರ ಸೆಂಟರ್’ಗಳು, ಆಯುಧ ಕೇಂದ್ರಗಳ ನಾಶವಾಗಬೇಕು, ನೂರು ವರ್ಷ ಪಾಕಿಸ್ತಾನ ತಲೆ ಎತ್ತಬಾರದು, ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಬೇಕು ಎಂದು ಆಗ್ರಹಿಸಿದರು.
ಸದ್ಯ ಕೇಂದ್ರದಲ್ಲಿ ಕಾಂಗ್ರೆಸ್’ನಂತಹ ನಾಯಕತ್ವವಿಲ್ಲ, ಈ ರೀತಿಯ ಗಾಂಧಿವಾದದ ಪರಿಣಾಮದಿಂದ ಲಕ್ಷಾಂತರ ಜನರನ್ನು ಕಳೆದುಕೊಂಡಿದ್ದೇವೆ, ದೇಶದಲ್ಲಿ ಭಯೋತ್ಪಾದನೆಯನ್ನು ಹುಟ್ಟು ಹಾಕಿದ್ದೆ
ನೀವು, ನಮ್ಮ ದೇಶದ ಸೈನಿಕರನ್ನು ಕೊಂದು ಹಾಕಿದ್ದೆ ಕಾಂಗ್ರೆಸ್, ಹಿಂದೂಗಳ ಹತ್ಯೆಯಾದ ವ್ಯಕ್ತಿಗಳ ಮೇಲೆ, ಈ ಸಮಯದಲ್ಲಿ ಗಾಂಧೀಜಿ ಅಲ್ಲ, ಸುಭಾಷ್ ಚಂದ್ರ ಬೋಸ ಅವರ ಸಿದ್ದಾಂತದ ಮೂಲಕ ಉತ್ತರ ಕೊಡತ್ತಾ ಇದ್ದೇವೆ ಎಂದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ