Breaking News

ವಿಸ್ಕಿ, ರಮ್, ಜಿನ್, ವೋಡ್ಕಾ ಬೆಲೆ ಏರಿಕೆ ಸಾಧ್ಯತೆ

Spread the love

ಬೆಂಗಳೂರು, ಮೇ 05: ರಾಜ್ಯದಲ್ಲಿ ಮತ್ತೆ ಐಎಂಎಲ್ (IML) ಮೇಲಿನ ದರ ಏರಿಕೆ ಆಗಲಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ದರ ಹೆಚ್ಚಳ ಮಾಡಿದೆ. ಇದೀಗ ಮತ್ತೆ ಮೂರನೇ ಬಾರಿ ಮದ್ಯ ದರ ಹೆಚ್ಚಳವಾಗಲಿದ್ದು,

ಈ ವಾರದಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಕಾರಣ 2024-25 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ಬರೋಬ್ಬರಿ 38600 ಕೋಟಿ ರುಪಾಯಿ ಟಾರ್ಗೆಟ್ ನೀಡಿತ್ತು. ಈ ಬಾರಿಯ ಬಜೆಟ್‌ನಲ್ಲಿ 40 ಸಾವಿರ ಕೋಟಿ ಟಾರ್ಗೆಟ್ ನೀಡಲಾಗಿದೆ. ಅಂದರೆ ಈ ಸಾಲಿನಲ್ಲಿ ಹೆಚ್ಚುವರಿಯಾಗಿ 1400 ಕೋಟಿ ರುಪಾಯಿ ಟಾರ್ಗೆಟ್ ನೀಡಿದ್ದು, ಹೊಸ ಟಾರ್ಗೆಟ್ ರೀಚ್ ಆಗಲು ಅಬಕಾರಿ ಇಲಾಖೆ ಮತ್ತೆ ದರ ಹೆಚ್ಚಳ ಮಾಡಲು ಪ್ಲಾನ್ ಮಾಡಿದೆಯಂತೆ.

ಈ ವಾರದಿಂದಲೇ ಎಲ್ಲಾ ರೀತಿಯ ಐಎಂಎಲ್​ಗಳ ಮೇಲೆ ಶೇ 10 ರಷ್ಟು ಏರಿಕೆ ಆಗಲಿದೆ. ಈಗಾಗಲೇ ದರ ಏರಿಕೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆಯಂತೆ. ದರ ಏರಿಕೆ ಬಗ್ಗೆ ಎಲ್ಲ ಮದ್ಯ ಮಾರಾಟಗಾರರಿಗೆ ಮಾಹಿತಿ ನೀಡಲಾಗಿದೆಯಂತೆ.

ಇನ್ನು, ಮದ್ಯದ 16 ಸ್ಲ್ಯಾಬ್​ಗಳಲ್ಲಿ 1 ರಿಂದ 4 ಸ್ಲ್ಯಾಬ್​ಗಳ ಮೇಲೆ ದರ ಏರಿಕೆ ಏರಿಕೆ ಮಾಡಲು ಅಬಕಾರಿ ಇಲಾಖೆ ಮುಂದಾಗಿದ್ದು, ಸ್ಯ್ಲಾಬ್-1, ಸದ್ಯ 80 ರೂಪಾಯಿ ಇದ್ದು ಅದರ ಮೇಲೆ 10 ರೂಪಾಯಿ ಏರಿಕೆ ಆಗಲಿದೆ. ಸ್ಲ್ಯಾಬ್- 2, 155 ರೂಪಾಯಿ ಇದ್ದು ಅದರ ಮೇಲೆ 15 ರೂಪಾಯಿ ಏರಿಕೆ ಆಗಲಿದೆ, ಸ್ಲ್ಯಾಬ್- 3, 185 ರೂಪಾಯಿ ಇದ್ದು ಅದರ ಮೇಲೆ 15 ರಿಂದ 20 ರೂಪಾಯಿ ಏರಿಕೆ ಆಗಲಿದೆ. ಸ್ಲ್ಯಾಬ್- 4, 235 ರೂಪಾಯಿ ಇದ್ದು ಅದರ ಮೇಲೆ 20 ರಿಂದ 25 ರೂಪಾಯಿ ಏರಿಕೆ ಆಗಲಿದೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ