ಸ್ಕೇಟಿಂಗ್ ಮೂಲಕ ರಾಜಹಂಸಗಢ ಏರುವ ಸ್ಪರ್ಧೆ…
ಬೆಳಗಾವಿಯ ಸ್ಕೇಟರ್ಸ್’ಗಳಿಂದ ಉತ್ತಮ ಪ್ರತಿಕ್ರಿಯೆ
ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನಿಂದ ರಾಜಹಂಸಗಡ ಕೋಟೆಯಲ್ಲಿ ಸ್ಕೇಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಫಿಟ್ ಇಂಡಿಯಾ ಸ್ಟ್ರಾಂಗ್ ಇಂಡಿಯಾ ಅಭಿಯಾನದಡಿಯಲ್ಲಿ,
ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನಿಂದ ರಾಜಹಂಸಗಡ ಕೋಟೆಯಲ್ಲಿ 2 ಕಿಲೋಮೀಟರ್ ಸ್ಕೇಟಿಂಗ್ ಮತ್ತು ಕೋಟೆಯನ್ನು ಏರುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಜಿಲ್ಲೆಯ 150 ಕ್ಕೂ ಹೆಚ್ಚು ಉನ್ನತ ಸ್ಕೇಟರ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಸ್ಪರ್ಧೆಯನ್ನು ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಕಾರ್ಯದರ್ಶಿ ಪ್ರಸಾದ್ ತೆಂಡೂಲ್ಕರ್ ಅವರು ಉದ್ಘಾಟಿಸಿದರು. ಸೌರಭ್ ಸಾಳೋಖೆ, ಸಿದ್ಧಾರ್ಥ್ ಪಾಟೀಲ್, ಆರ್ಯ ಕದಂ, ಕುಲದೀಪ್ ಬಿರ್ಜೆ, ಸರ್ವೇಶ್ ಪಾಟೀಲ್, ಸಾರ್ಥಕ್ ಚವ್ಹಾಣ್, ಋತ್ವಿಕ್ ದುಬ್ಬಾಶಿ, ಶಲ್ಯ ತರಳೇಕರ್, ಸಮೀದ್ ಕಣಗಲಿ, ವಿಹಾನ್ ಕಣಗಲಿ, ಆರಕ್ಷಣ್ ಮಡಿವಾಳೆ, ಅನುಷ್ಕಾ ಶಂಕರ ಗೌಡ, ಪ್ರಾಂಜಲ್ ಪಾಟೀಲ್, ಪ್ರತೀಕ್ಷಾ ವಾಘೇಲಾ, ಸ್ವರಾಲಿ ರಜಪೂತ್, ಅನಘಾ ಜೋಶಿ, ಆರಾಧ್ಯ ಪಿ, ಸ್ವರಾಲಿ ಪಾಟೀಲ್ ಸ್ಪರ್ಧೆಯಲ್ಲಿ ವಿಜೇತರಾದರು. ವಿನೋದ್ ಬಾಮನೆ ಅವರು ವಿಜೇತರಿಗೆ ಬಹುಮಾನವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜ್ಯೋತಿಬಾ ನರವಾಡೆ ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಸ್ಕೇಟರ್‌ಗಳಾದ ಸೂರ್ಯಕಾಂತ್ ಹಿಂಡಲಗೇಕರ, ಶ್ಯಾಮದೇವ್ ಪವಾರ್, ಯೋಗೀಶ್ ಕುಲಕರ್ಣಿ, ಮಂಜುನಾಥ ಮಂಡೋಳ್ಕರ್, ರೋಹನ್ ಕೋಕನೆ, ಸೋಹಮ್ ಹಿಂಡಲಗೇಕರ್, ರಾಜ್ ಕದಂ, ಶ್ರೀ ತರಳೇಕರ್, ಋಷಿಕೇಶ ಪಸಾರೆ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.