Breaking News

ಲವ್ವರ್ ಜೊತೆ ಸಿಕ್ಕಿಬಿದ್ದ ಪತ್ನಿ – ಸಿಟ್ಟಿಗೆದ್ದ ಪತಿಯಿಂದ ಡಬಲ್ ಮರ್ಡರ್

Spread the love

ಕಲಬುರಗಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿಯು ಪರ ಪುರುಷನೊಂದಿಗೆ ಒಟ್ಟಿಗೆ ಇದ್ದುದನ್ನು ಕಣ್ಣಾರೆ ಕಂಡ ಪತಿ ಮಾರಕಾಸ್ತ್ರಗಳಿಂದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಚ್ಚಿ ಕೊಂದಿರುವ ಘಟನೆ ಕಲಬುರಗಿಯ (Kalaburagi) ಆಳಂದ ತಾಲೂಕಿನ ಮಾದನಹಿಪ್ಪರಗಾ (Madanahipparaga) ಗ್ರಾಮದಲ್ಲಿ ನಡೆದಿದೆ.ಸೃಷ್ಟಿ(22), ಖಾಜಪ್ಪ(23) ಮೃತರು. ಆರೋಪಿ ಶ್ರೀಮಂತ ಕೊಲೆ ಮಾಡಿ, ಮಾದನಹಿಪ್ಪರಗಾ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. 

2 ವರ್ಷಗಳ ಹಿಂದೆ ಸೃಷ್ಟಿಯು ಶ್ರೀಮಂತನನ್ನು ಮದುವೆಯಾಗಿದ್ದಳು. ಗುರುವಾರ ಊರಿಗೆ ತೆರಳಿದ್ದ ಶ್ರೀಮಂತ, ರಾತ್ರಿ ಮನೆಗೆ ಹಿಂದಿರುಗಿದ್ದ. ಮನೆಯಲ್ಲಿ ಪತ್ನಿಯು ಅದೇ ಗ್ರಾಮದ ಖಾಜಪ್ಪನ ಜೊತೆ ಇರುವುದನ್ನು ಕಣ್ಣಾರೆ ಕಂಡು ಕೋಪಗೊಂಡ ಶ್ರೀಮಂತ ತಕ್ಷಣ ಮಾರಕಾಸ್ತ್ರಗಳಿಂದ ಇಬ್ಬರನ್ನೂ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ