Breaking News

ಧರೋಜಿ ಧಾಮದಲ್ಲಿ ಕರಡಿಗಳ ತುಂಟಾಟ; ವರ್ಷಧಾರೆಯ ಸಿಂಚನಕ್ಕೆ ನರ್ತನ ಮಾಡಿದ ನವಿಲು

Spread the love

ವಿಜಯನಗರ: ಏಷ್ಯಾದ ಅತಿದೊಡ್ಡ ಕರಡಿ ಧಾಮವೆಂದು ಖ್ಯಾತಿ ಪಡೆದಿರುವ ದರೋಜಿ ಕರಡಿ ಧಾಮದ ಕಾನನದಲ್ಲಿ ಕರಡಿಗಳು ತುಂಟಾಟವಾಡಿ ನಲಿಯುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಳೆದ ತಿಂಗಳಿಂದ ಏರುತ್ತಿರುವ ಬಿಸಿಲಿನ ತಾಪದ ಬೇಗೆಯಿಂದ ಬೆಂದಿದ್ದ ವನ್ಯಮೃಗಗಳು ಮಳೆ ಬಂದ ಹಿನ್ನೆಲೆ ಹಾಗೂ ವಾತಾವರಣ ತಂಪಾದ ಕಾರಣ ಈ ರೀತಿ ಚಿನ್ನಾಟವಾಡುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿವೆ.

ಕಡುಬಿಸಿಲಿನಿಂದ ಕಾದು ಹೆಂಚಾಗಿದ್ದ ಧರೆ, ಮಳೆಯಿಂದ ಕೂಲ್ ಕೂಲ್ ಆಗಿದ್ದು, ಕರಡಿ ಧಾಮದಲ್ಲಿನ ಕರಡಿಗಳು ಕೂಡಾ ಈ ವಾತಾವರಣದಲ್ಲಿನ ಬದಲಾವಣೆಗೆ ಸಂತಸಗೊಂಡಂತಿದೆ. ಬಿಸಿಲಿನ ಕಾರಣಕ್ಕೆ ತೆರೆಮರೆಯಲ್ಲಿದ್ದ ಕರಡಿಗಳೀಗ ಹೊರಗೆ ಬಂದು ಓಡಾಡುತ್ತಿವೆ.ತಾಯಿ ಕರಡಿಯೊಂದಿಗೆ ಮರಿಕರಡಿಗಳು ಬಿಂದಾಸ್ ಆಗಿ ಓಡಾಡುತ್ತಿರುವ ದೃಶ್ಯಗಳು ಪ್ರವಾಸಿಗರ ಮೊಬೈಲ್​ನಲ್ಲಿ ಸೆರೆಯಾಗಿವೆ. ದರೋಜಿ ಕರಡಿ ಧಾಮಕ್ಕೆ ನಿತ್ಯ ಬಹುಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹಂಪಿ ನೋಡಲು ಬರುವ ಪ್ರವಾಸಿಗರಿಗೆ ದರೋಜಿ ಕರಡಿ ಧಾಮ ಒಂದು ವಿಭಿನ್ನ ಅನುಭವ ಕೊಡುವುದಂತೂ ನಿಜ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ