Breaking News

ʻಗಾಂಧಿ ಹತ್ಯೆಯ ಸತ್ಯʼ ನಾಟಕ ಪ್ರದರ್ಶನದ ವೇಳೆ ಗದ್ದಲ; ಅಡ್ಡಂಡ ಕಾರ್ಯಪ್ಪ ಮುಖಕ್ಕೆ ಮಸಿ ಬಳಿದು ಆಕ್ರೋಶ

Spread the love

ಬೆಂಗಳೂರು: ಬನಶಂಕರಿಯ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ʻಗಾಂಧಿ ಹತ್ಯೆಯ ಸತ್ಯʼ ನಾಟಕ ಪ್ರದರ್ಶನದ ವೇಳೆ ಏರ್ಪಟ್ಟ ಗದ್ದಲದ ವೇಳೆ ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ಮುಖಕ್ಕೆ ಮಸಿ ಬಳಿಯಲಾಗಿದೆ.

ಬನಶಂಕರಿಯ ಸುಚಿತ್ರ ಫಿಲಂ ಅಕಾಡೆಮಿಯಲ್ಲಿ ಆಯೋಜಿಸಿದ್ದ ನಾಟಕದಲ್ಲಿ ಮಹಾತ್ಮ ಗಾಂಧೀಜಿ ವಿರುದ್ಧ ಆಕ್ಷೇಪಾರ್ಹ ಸಂಭಾಷಣೆ ಬಳಸಲಾಗಿದೆ ಎಂದು ಆಕ್ರೋಶಗೊಂಡ ಸಂಘಟನೆಗಳ ಮುಖಂಡರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಅಕಾಡೆಮಿಗೆ ನುಗ್ಗಿದ್ದಾರೆ. ಬಳಿಕ ಮಾತಿನ ಚಕಮಕಿ ನಡೆದು ಅಡ್ಡಂಡ ಕಾರ್ಯಪ್ಪ ಅವರನ್ನ ಎಳೆದಾಡಿದ್ದಾರೆ. ಇದೇ ವೇಳೆ ಮುಖಕ್ಕೆ ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ.

ಬನಶಂಕರಿ 2ನೇ ಹಂತದಲ್ಲಿರುವ ಅಕಾಡೆಮಿಯಲ್ಲಿ ‘ಕೊಡಗು ರಂಗಭೂಮಿ ಟ್ರಸ್ಟ್’ನಿಂದ ‘ಗಾಂಧಿ ಹತ್ಯೆಯ ಸತ್ಯ’ ಎಂಬ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಈ ನಾಟಕವನ್ನ ಅಡ್ಡಂಡ ಕಾರ್ಯಪ್ಪ ಅವರೇ ನಿರ್ದೇಶನ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧಿಯವರನ್ನ ದೇಶ ವಿರೋಧಿ ಹಾಗೂ ಮುಸ್ಲಿಮರ ಪರ ಎಂದು ಬಿಂಬಿಸಿ ಸುಳ್ಳು ಪ್ರಚಾರ ಮಾಡಿದ್ದಾರೆ. ನಾಟಕದ ಮೂಲಕ ಅಡ್ಡಂಡ ಕಾರ್ಯಪ್ಪ ತಪ್ಪು ಸಂದೇಶ ರವಾನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಮಹಾತ್ಮ ಗಾಂಧೀಜಿ ಯವರು ದೇಶ ವಿಭಜಿಸಿದರು ಎಂದು ನಾಟಕದ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಪಾದಿಸಿ ಬನಶಂಕರಿ ಠಾಣೆಗೆ ಸಂಘಟನೆಗಳ ಮುಖಂಡರು ದೂರು ನೀಡಿದ್ದಾರೆ.

‘ಬೆಂಗಳೂರಿನಲ್ಲಿ ನಡೆಯುವ ನಾಟಕ ಪ್ರದರ್ಶನಕ್ಕೆ ಮೈಸೂರಿನ ಟಿಕೆಟ್‌ಗಳನ್ನ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಅದನ್ನು ಪ್ರಶ್ನಿಸಿದರೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ನಾಟಕದ ರಚನೆ, ನಿರ್ದೇಶನ ಮಾಡಿರುವ ಅಡ್ಡಂಡ ಕಾರ್ಯಪ್ಪ, ನಾಟಕದಲ್ಲಿ ಅಭಿನಯಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


Spread the love

About Laxminews 24x7

Check Also

Special: ಕನ್ನಡವೇ ನಮ್ಮ ಉಸಿರು, ಕರ್ನಾಟಕವೇ ನಮ್ಮ ಹೆಮ್ಮೆ

Spread the loveನವೆಂಬರ್ 1, ಪ್ರತಿಯೊಬ್ಬ ಕನ್ನಡಿಗನ ಪಾಲಿಗೆ ಅತ್ಯಂತ ಹೆಮ್ಮೆಯ, ಅಭಿಮಾನದ ಹಾಗೂ ಸಂಭ್ರಮದ ದಿನ. ಕನ್ನಡ ನಾಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ