ಬೆಂಗಳೂರು, ಏಪ್ರಿಲ್ 1: ಆ ಟೀಚರ್ ಅಂತಿಥ ಮಹಿಳೆಯಲ್ಲ. ಪ್ರಿ ಸ್ಕೂಲ್ಗೆ ಬರುತ್ತಿದ್ದ ಮಕ್ಕಳ ತಂದೆಗೇ ಮುತ್ತು ಕೊಟ್ಟು ಹನಿಟ್ರ್ಯಾಪ್ (Honey Trap) ಮಾಡಿದ್ದಲ್ಲದೆ, 50 ಸಾವಿರ ರೂ. ಸುಲಿಗೆ ಮಾಡಿದ್ದಾಳೆ. ಮತ್ತೆ ಬೆದರಿಕೆಯೊಡ್ಡಿ ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ವಸೂಲಿ ಮಾಡಿದ್ದಲ್ಲದೆ, ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಮತ್ತಷ್ಟು ಹಣ ವಸೂಲಿ ಮಾಡಲು ಮುಂದಾದ ಟೀಚರ್ (Pre School Teacher) ಹಾಗೂ ಗ್ಯಾಂಗ್ ಈಗ ಪೊಲೀಸ್ ಬಲೆಗೆ ಬಿದ್ದಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ಖಾಸಗಿ ಪ್ರೀಸ್ಕೂಲ್ (Pre School) ನಡೆಸುತ್ತಿದ್ದ ಶ್ರೀದೇವಿ ರುಡಿಗಿ ಎಂಬಾಕೆಯೇ ಹನಿಟ್ರ್ಯಾಪ್ ಎಸಗಿದ ಶಿಕ್ಷಕಿ.
ಶಿಕ್ಷಕಿಯ ಹನಿಟ್ರ್ಯಾಪ್ ಬಲೆಗೆ ಬಿದ್ದ ಪೋಷಕ
ಆರೋಪಿ ಶ್ರೀದೇವಿ ರುಡಿಗಿಗೆ 2023 ರಲ್ಲಿ ರಾಕೇಶ್ ಎಂಬ ಪೋಷಕನ ಪರಿಚಯವಾಗಿತ್ತು. ರಾಕೇಶ್ನಿಂದ ಶಾಲೆ ನಿರ್ವಹಣೆ, ತಂದೆಯ ಚಿಕಿತ್ಸೆಗೆಂದು ಶ್ರೀದೇವಿ 4 ಲಕ್ಷ ರೂ. ಸಾಲ ಪಡೆದಿದ್ದಳು. 2024ರ ಮಾರ್ಚ್ನಲ್ಲಿ ವಾಪಸ್ ಕೊಡುವುದಾಗಿ ತಿಳಿಸಿದ್ದಳು. ಆದರೆ, ಹಣ ವಾಪಸ್ ಕೇಳಿದಾಗ ಕೊಟ್ಟಿರಲಿಲ್ಲ. ‘ತುಂಬಾ ಕಷ್ಟವಿದೆ. ಹಣ ಈಗ ಕೊಡಲು ಆಗುವುದಿಲ್ಲ. ನೀವು ಶಾಲೆಯ ಪಾರ್ಟನರ್ ಆಗಿ’ ಎಂದಿದ್ದಳು.
ಶುರುವಾಯ್ತು ಪಾರ್ಟನರ್ಶಿಪ್, ಸುತ್ತಾಟ
ನಂತರ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಇಬ್ಬರೂ ಹಲವೆಡೆ ಜತೆಯಾಗಿ ಸುತ್ತಾಟ ನಡೆಸಿದ್ದಾರೆ. ಶ್ರೀದೇವಿ ಜೊತೆ ಮಾತನಾಡಲೆಂದೇ ರಾಕೇಶ್ ಹೊಸ ಸಿಮ್ ಹಾಗೂ ಪೋನ್ ಖರೀದಿಸಿದ್ದರು. ಆದರೆ, ನಂತರ ಜನವರಿ ಮೊದಲ ವಾರದಲ್ಲಿ ಹಣ ವಾಪಸ್ ಕೇಳಿದ್ದರು. ಹಣ ವಾಪಸ್ ಕೇಳಿದ್ದ ರಾಕೇಶ್ಗೆ, ‘ನಿನ್ನ ಜೊತೆ ರಿಲೇಶನ್ ಶಿಪ್ನಲ್ಲಿ ಇರುತ್ತೇನೆ’ ಎಂದು ಹೇಳಿದ್ದ ಶ್ರೀದೇವಿ 15 ಲಕ್ಷ ರೂ. ಹಣ ಕೇಳಿದ್ದಳು. ಇದಕ್ಕೆ ರಾಕೇಶ್ ಒಪ್ಪಿರಲಿಲ್ಲ.
Laxmi News 24×7