ವೃದ್ದೆಯೊಬ್ಬರು ಸಾರಿಗೆ ಬಸ್ನಲ್ಲಿ ಟಿಕೆಟ್ ಕಳೆದುಕೊಂಡು ಪರದಾಡಿದ ಘಟನೆ ನಡೆದಿದೆ. ಸಾರಿಗೆ ಬಸ್ ನಲ್ಲಿ ಕಂಡಕ್ಟರ್ ಕೊಟ್ಟ ಉಚಿತ ಪ್ರಯಾಣ ಟಿಕೆಟ್ ನ್ನು ವೃದ್ಧೆ ಕಳೆದುಕೊಂಡ ಘಟನೆ ವಿಜಯಪುರ ಜಿಲ್ಲೆಯ ಇಂಡಿ – ಚಡಚಣ ಮಾರ್ಗದ ಬಸ್ ನಲ್ಲಿ ನಡೆದಿದೆ. ಟಿಕೆಟ್ ಕಳೆದುಕೊಂಡ ಅಜ್ಜಿ ಮತ್ತೊಂದು ಟಿಕೆಟ್ ನೀಡುವಂತೆ ಕಂಡಕ್ಟರ್ ಗೆ ಮನವಿ ಮಾಡಿಕೊಂಡರು. ಆಗ ಕಂಡಕ್ಟರ್ ಟಿಕೆಟ್ ನೀಡಲು ನಿರಾಕರಿಸಿದ್ದಾರೆ.
ಅಜ್ಜಿ ಟಿಕೆಟ್ ಎಲ್ಲಿ ಹೋಯ್ತು ಅಂತ ಬಸ್ ತುಂಬಾ ಹುಡುಕಾಟ ನಡೆಸಿದ್ಧಾರೆ. ಇನ್ನೂ ಅಜ್ಜಿ ಹುಡುಕಾಟದ ದೃಶ್ಯವನ್ನು ಸಹ ಪ್ರಯಾಣಿಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಅಜ್ಜಿ ಜೊತೆಗೆ ಸಹ ಪ್ರಯಾಣಿಕರು ಸೀಟ್ ಕೆಳಗೆ ಟಿಕೆಟ್ ಗಾಗಿ ಎಷ್ಟೇ ಹುಡುಕಾಟ ನಡೆಸಿದ್ದರೂ ಟಿಕೆಟ್ ಪತ್ತೆಯಾಗಿಲ್ಲಾ. ಮಹಿಳೆಯರಿಗೆ ಸಾರಿಗೆ ಬಸ್ ನಲ್ಲಿ ಉಚಿತ ಟಿಕೆಟ್ ವಿತರಣೆ ಮಾಡಲಾಗುತ್ತದೆ. ವಿಜಯಪುರ ಜಿಲ್ಲೆ ಇಂಡಿ ತಾ. ಚಡಚಣ ಮಾರ್ಗದ ಬಸ್ ನಲ್ಲಿ ಅಜ್ಜಿಯೊಬ್ಬಳ ಟಿಕೆಟ್ ಗಾಗಿ ಹುಡುಕಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Laxmi News 24×7