Breaking News

ಮಂಗೇಶ ಪವಾರ, ವಾಣಿ‌ ವಿಲಾಸ ಜೋಶಿ‌ ಬೆಳಗಾವಿ ಮೇಯರ್ ಹುದ್ದೆ : ಮತ್ತೆ ಚುಕ್ಕಾಣಿ ‌ಹಿಡಿದ ಬಿಜೆಪಿ

Spread the love

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ 23ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿಗಳಾದ ಮಂಗೇಶ ಪವಾರ ಹಾಗೂ‌ ಉಪಮೇಯರ್ ಆಗಿ ವಾಣಿ‌ ವಿಲಾಸ ಜೋಶಿ‌ ಬಹುಮತದಿಂದ ಆಯ್ಕೆಯಾದರು.

ಮೇಯರ್ ಸ್ಥಾನ ಸಾಮಾನ್ಯ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 40 ಸದಸ್ಯರನ್ನು ಹೊಂದಿರುವ ಬಿಜೆಪಿ ಮತ್ತೊಮ್ಮೆ ಪಾಲಿಕೆ‌ ಚುಕ್ಕಾಣಿ ‌ಹಿಡಿಯುವಲ್ಲಿ ಯಶಸ್ವಿಯಾಯಿತು. ಮರಾಠಿಗರಾದ ಮಂಗೇಶ ಪವಾರ 41ನೇ ವಾರ್ಡ್ ಸದಸ್ಯರಾಗಿದ್ದು, ವೃತ್ತಿಯಲ್ಲಿ ನೇಕಾರಿಕೆ ಮಾಡುತ್ತಾರೆ‌. ಇನ್ನು ಕನ್ನಡತಿ ವಾಣಿ ಜೋಶಿ 43ನೇ ವಾರ್ಡಿನ ಸದಸ್ಯರಾಗಿದ್ದಾರೆ. ಕಳೆದ ಬಾರಿ‌ ಉತ್ತರಕ್ಕೆ ಮೇಯರ್ ಮತ್ತು ದಕ್ಷಿಣಕ್ಕೆ ಉಪಮೇಯರ್ ಸ್ಥಾನ ನೀಡಲಾಗಿತ್ತು. ಆದರೆ, ಈ ಬಾರಿ‌ ಎರಡೂ ಸ್ಥಾನಗಳು ದಕ್ಷಿಣ ವಿಧಾನಸಭಾ ಕ್ಷೇತ್ರದ ಪಾಲಾಗಿವೆ. ಈ ಮೂಲಕ ಶಾಸಕ ಅಭಯ್ ಪಾಟೀಲ ಬಿಗಿಹಿಡಿತ ಪಾಲಿಕೆಯಲ್ಲಿ ಮುಂದುವರೆದಿದೆ.

ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆನ್ನವರ ಚುನಾವಣಾ ಪ್ರಕ್ರಿಯೆ ಶುರು ಮಾಡಿದರು. ಮೇಯರ್ ಸ್ಥಾನಕ್ಕೆ ಬಿಜೆಪಿಯ ಮಂಗೇಶ ಪವಾರ್, ರಾಜು ಭಾತಖಾಂಡೆ, ಪಕ್ಷೇತರ ಅಭ್ಯರ್ಥಿ ಬಸವರಾಜ ಮೋದಗೇಕರ್, ಎಐಎಂಐಎಂನ ಶಾಹಿದ್​​ಖಾನ್ ಪಠಾಣ ತಲಾ 2 ನಾಮಪತ್ರ ಸಲ್ಲಿಸಿದರು. 2 ನಿಮಿಷ ಅವಕಾಶದ ಬಳಿಕ ರಾಜು ಭಾತಖಾಂಡೆ ಹಾಗೂ ಶಾಹಿದಖಾನ್ ಪಠಾಣ ತಮ್ಮ ನಾಮಪತ್ರ ಹಿಂಪಡೆದರು.

ಮಂಗೇಶ ಪರ 40 ಮತ : ನಂತರ, ಮಂಗೇಶ ಹಾಗೂ ಬಸವರಾಜ ಮಧ್ಯೆ ಚುನಾವಣೆ ನಡೆಯಿತು. ಮಂಗೇಶ ಪರವಾಗಿ 40, ವಿರುದ್ಧವಾಗಿ 5 ಮತಗಳು ಚಲಾವಣೆಯಾದವು. ತಟಸ್ಥವಾಗಿ ಇರುವ ಆಯ್ಕೆಗೆ ಯಾರೂ ಕೈ ಎತ್ತಲಿಲ್ಲ. ಇನ್ನು ಬಸವರಾಜ ಪರವಾಗಿ 20, ವಿರೋಧವಾಗಿ 40 ಮತಗಳು ಬಂದವು. ಹಾಗಾಗಿ, ಅತಿ ಹೆಚ್ಚು ಮತ ಪಡೆದ ಹಿನ್ನೆಲೆಯಲ್ಲಿ ಮಂಗೇಶ ಪವಾರ ಅವರನ್ನು ಮೇಯರ್ ಎಂದು ಚುನಾವಣಾ ಅಧಿಕಾರಿ ಘೋಷಿಸಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ