Breaking News

ವಿಜಯಪುರದಲ್ಲಿ ಅಕ್ರಮ ಕಸಾಯಿಖಾನೆಗಳ ದರ್ಬಾರ್

Spread the love

ವಿಜಯಪುರ, ಮಾರ್ಚ್​ 13: ನಗರದ ಅಕ್ರಮ ಕಾಸಾಯಿ ಖಾನೆಗಳ (slaughterhouses) ಅಡ್ಡೆಯಾಗುತ್ತಿದೆಯಾ? ಹೀಗೊಂದು ಪ್ರಶ್ನೆ ಹುಟ್ಟಿಕೊಂಡಿದೆ.

ಕಾರಣ ನಗದರ ಹೃದಯ ಭಾಗದಲ್ಲಿ ಅದರಲ್ಲೂ ಎಸ್ಪಿ ಕಚೇರಿ ಕೂಗಳತೆಯಲ್ಲೇ ಈ ಅಕ್ರಮ ನಡೆಯುತ್ತಿದೆ. ವಾರ್ಡ್ ನಂಬರ್ 7 ರಲ್ಲಿನ ಶಾಪೂರ (Shapur) ಆಗಸಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗಳನ್ನು ನಡೆಸಲಾಗುತ್ತಿದೆ.

ಇಡೀ ಏರಿಯಾದಲ್ಲಿ ಕೆಟ್ಟ ದುರ್ವಾಸನೆ ಬೀರಿದ್ದು, ಶ್ವಾಸಕೋಶದ ರೋಗಕ್ಕೀಡಾಗುವಂತಾಗಿದೆ. ಚರಂಡಿಯಲ್ಲಿ ಜಾನುವಾರುಗಳ ರಕ್ತ, ತ್ಯಾಜ್ಯವೇ ಹರಿದು ಹೋಗುತ್ತಿದೆ. ಸಂಬಂಧ ಪಟ್ಟ ಆಧಿಕಾರಿಗಳ ನಿರ್ಲಕ್ಷತನವೋ ಅಥವಾ ಜಾಣ ಕುರುಡೋ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಅಕ್ರಮ ಕಸಾಯಿಖಾನೆಗಳ ಅಟ್ಟಹಾಸ

ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 7 ರಲ್ಲಿ ಬರುವ ಶಾಪೂರ ಅಗಸಿಯಲ್ಲಿ ಅಕ್ರಮ ಕಸಾಯಿಖಾನೆಗಳು ಕಾರ್ಯ ನಿರ್ವಹಿಸುತ್ತವೆ. ಕಾನೂನು ಪ್ರಕಾರ ಇಲ್ಲಿ ಜಾನುವಾರುಗಳ ವಧೆ ನಡೆಯುತ್ತಿಲ್ಲಾ. ಇಲ್ಲಿನ ಕಸಾಯಿಖಾನೆಗಳು ಪರವಾನಿಗೆಯನ್ನು ಪಡೆಯದೇ ಹಸುಗಳು ಸೇರಿದಂತೆ ಇತರೆ ಪ್ರಾಣಿಗಳ ವಧೆ ಮಾಡಿ ಮಾಂಸ, ಚರ್ಮದ ವ್ಯಾಪಾರ ವಹಿವಾಟು ಮಾಡುತ್ತಿವೆ. ಪ್ರಾಣಿಗಳ ವಧೆಯಿಂದ ಬರುವ ರಕ್ತ ಹಾಗೂ ತ್ಯಾಜ್ಯ ಸಂಸ್ಕರಣೆ ಮಾಡದೇ ಚರಂಡಿಗೆ ಬಿಡುವ ಕಾರಣ ಇಡೀ ಚರಂಡಿಯಲ್ಲಿ ರಕ್ತವೇ ಹರಿದು ಹೋಗುವಂತೆ ಕಾಣುತ್ತಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ