Breaking News

ಹಸೆಮಣೆ ಏರಬೇಕಿದ್ದ ಮಗನಿಗೆ ಚಟ್ಟ ಕಟ್ಟಿದ ತಂದೆ ಮತ್ತು ಅಣ್ಣ?

Spread the love

ಹಸೆಮಣೆ ಏರಬೇಕಿದ್ದ ಮಗನಿಗೆ ಚಟ್ಟ ಕಟ್ಟಿದ ತಂದೆ ಮತ್ತು ಅಣ್ಣ !!!!
‘ಲವ್ ಮ್ಯಾರೇಜ್’ – ಜೀವನ ಆರಂಭವಾಗುವ ಮೊದಲೇ ಕ್ಲೋಸ್!!!
ಪ್ರೀತಿಸಿದ ಯುವತಿ ಜೊತೆಗೆ ಮದುವೆಗೆ ನಿಶ್ಚಿತಾರ್ಥ ಮಾಡಿದರೂ ಕೂಡ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಕಿರಿಯ ಮಗನನ್ನು ತಂದೆ ಮತ್ತು ಅಣ್ಣ ಬರ್ಬರವಾಗಿ ಕೊಲೆಗೈದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ಹಸೆಮಣೆ ಏರಬೇಕಿದ್ದ ಕಿರಿಯ ಮಗನಿಗೆ ಹಿರಿಯ ಮಗನೊಂದಿಗೆ ತಂದೆ ಚಟ್ಟ ಕಟ್ಟಿದ ಘಟನೆ ನಡೆದಿದೆ. ಮದುವೆ ಮಾಡಿಸಿಲ್ಲ ಎಂದು ಕುಡಿದು ಬಂದು ನಿತ್ಯ ಕಿರಿಕಿರಿ ಚಿಕ್ಕನಂದಿಹಳ್ಳಿ ಗ್ರಾಮದ ಮಂಜುನಾಥ ಉಳ್ಳಾಗಡ್ಡಿ (25) ಕಿರಿಯ ಮಗನನ್ನು ಕಲ್ಲು, ಇಟ್ಟಿಗೆಗಳಿಂದ ಜಜ್ಜಿ ತಂದೆ ನಾಗಪ್ಪ ಉಳ್ಳೆಗಡ್ಡಿ(63) ಮತ್ತು ಸಹೋದರ ಗುರುಬಸಪ್ಪ ಉಳ್ಳೆಗಡ್ಡಿ(28), ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಪ್ರೀತಿಸಿದ ಯುವತಿಯೊಂದಿಗೆ ಮದುವೆ ಮಾಡಬೇಕೆಂದು ಮಂಜುನಾಥ ಪಟ್ಟು ಹಿಡಿದಿದ್ದ, ಆರಂಭದಲ್ಲಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ನಂತರ, ಪ್ರೀತಿಸಿದ ‌ಯುವತಿ ಜೊತೆಗೆ ಮದುವೆಗೆ ಅಸ್ತು ಎಂದು ನಿಶ್ಚಿತಾರ್ಥ ಕಾರ್ಯ ಕೂಡ ಮಾಡಿದ್ದರು. ಮದುವೆ ಮಾಡಲು ಸಿದ್ಧತೆ ಮಾಡಿಕೊಳ್ತಿದ್ದರೂ ಕುಡಿದು ಬಂದು ಮಂಜುನಾಥ ‌ಗಲಾಟೆ ಮಾಡುತ್ತಿದ್ದ. ಮದುವೆಗೆ ಒಪ್ಪಿಕೊಳ್ಳಲು ತಡ ಮಾಡಿದಕ್ಕೆ ಕುಡಿತದ ಚಟಕ್ಕೆ ದಾಸನಾಗಿದ್ದ. ನಿನ್ನೆ ಕೂಡ ಕುಡಿದು ಬಂದು ತಾಯಿ ಜೊತೆಗೆ ಗಲಾಟೆಗೆ ಮಾಡುತ್ತಿದ್ದ. ಇದರಿಂದ ಸಿಟ್ಟಿಗೆದ್ದು ಹಿರಿಯ ಮಗ ಗುರುಬಸಪ್ಪ ಮತ್ತು ತಂದೆ ನಾಗಪ್ಪ ಸೇರಿ ಮಂಜುನಾಥನನ್ನು ಕೊಲೆ ಮಾಡಿದ್ದಾರೆ.
ಇಷ್ಟರಲ್ಲೇ ಮದುವೆ ಕಾರ್ಯ ನಡೆಯಲಿತ್ತು, ಆದರೇ, ಮದುವೆ ವಿಷಯವಾಗಿ ಗಲಾಟೆಯಾಗಿ ಮನೆಯವರು ಕೊಲೆ ಮಾಡಿದ್ದಾರೆ. ಯಾರೊಂದಿಗೂ ಮಂಜುನಾಥ ಜಗಳವಿರಲಿಲ್ಲ. ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದ. ಮಳೆಗಾಲದಲ್ಲಿ ಕಾರ್ಖಾನೆಯಲ್ಲೂ ಕೆಲಸ ಮಾಡುತ್ತಿದ್ದ ಎಂದು ಮಂಜುನಾಥ ಗೆಳೆಯ ಶಶಿಕಾಂತ ಹೇಳಿದರು.
ಇನ್ನು ಮನೆಯಲ್ಲಿ ಮದುವೆಗಾಗಿ 50 ಸಾವಿರ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಆದರೇ ಮನೆಯಲ್ಲಿ ಕೊಡದಿದ್ದಾಗ ಕುಡಿದು ಬಂದು ಗಲಾಟೆ ಮಾಡಿದ್ದಾನೆ. ಈ ವೇಳೆ ತಂದೆ ಮತ್ತು ಆತನ ಹಿರಿಯ ಸಹೋದರ ಆತನನ್ನು ಕೆಳಗೆ ಬೀಳಿಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ.
ಕಳೆದ 1 ವರ್ಷದಿಂದ ಓರ್ವ ಯುವತಿಯನ್ನು ಪ್ರೀತಿಸಿದ್ದ ಇದೇ 12ನೇ ತಾರೀಖಿನಂದು ಮದುವೆ ಕಾರ್ಯವಿತ್ತು ಎಂದು ರಾಜು ಕಟಗೇರಿ ಹೇಳಿದರು.
ಇನ್ನು ಕುಟುಂಬದವರು ಮಂಜುನಾಥ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಪ್ರತಿದಿನ ಕುಡಿದು ಬಂದು ತಂದೆ-ತಾಯಿಯರನ್ನೇ ಹೊಡೆಯುತ್ತಿದ್ದ. ಮಧ್ಯಾನ್ಹ ತಾಯಿಯನ್ನು ಹೊಡೆದಿದ್ದ, ಆಕೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ ಮನೆಗೆ ಬರುತ್ತಲೇ, ತಂದೆಯನ್ನು ಹೊಡೆದು ಕೈ ಮುರಿದಿದ್ದ ಎಂದು ಕುಟುಂಬದ ಸದಸ್ಯೆ ಲಕ್ಷ್ಮೀ ಹೇಳಿದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ