Breaking News

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇಲ್ಲ; ಕೃಷಿ ಪಂಪ್‌ ಸೆಟ್‌ಗಳಿಗೆ ಏಳು ಗಂಟೆ ವಿದ್ಯುತ್‌ ಪೂರೈಕೆ – ಸಚಿವ ಜಾರ್ಜ್

Spread the love

ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇಲ್ಲ, ಸಮಸ್ಯೆಯೂ ಇಲ್ಲ. ಕೃಷಿ ಪಂಪ್‌ ಸೆಟ್‌ಗಳಿಗೆ 7 ಗಂಟೆ ವಿದ್ಯುತ್‌ ಪೂರೈಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಶೂನ್ಯವೇಳೆಯಲ್ಲಿ ಇಂದು ಬಿಜೆಪಿಯ ಶಾಸಕ ಸಿದ್ದು ಸವದಿ, ವಿದ್ಯುತ್‌ ಕಡಿತದ ಬಗ್ಗೆ ಪ್ರಸ್ತಾಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಂಪ್‌ ಸೆಟ್‌ಗಳಿಗೆ ಇಡೀ ರಾಜ್ಯದಲ್ಲಿ ಪವರ್‌ ಕಟ್‌ ಇಲ್ಲ. 7 ಗಂಟೆ ವಿದ್ಯುತ್‌ ನೀಡುತ್ತಿದ್ದೇವೆ. ದುರಸ್ತಿ ಸಂದರ್ಭದಲ್ಲಿ ವಿದ್ಯುತ್‌ ಕಡಿತವಾಗಬಹುದು. ಇತ್ತೀಚೆಗೆ ಎಸ್ಕಾಂಗಳ ಸಭೆ ನಡೆಸಿದಾಗ ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇಲ್ಲ ಎಂದು ಹೇಳಿದ್ದಾರೆ ಎಂದರು.

ದಿನದ 24 ಗಂಟೆ ವಿದ್ಯುತ್‌ ಪೂರೈಸುವ ನಿರಂತರ ಜ್ಯೋತಿ ಚಾಲ್ತಿಯಲ್ಲಿದೆ. ಕೃಷಿಗೆ ಏಳು ಗಂಟೆ ಪೂರೈಸುವ ವೇಳೆಯಲ್ಲಿ ನಿರಂತರ ಜ್ಯೋತಿಗೆ ಸಿಂಗಲ್‌ ಫೇಸ್‌‍ ನೀಡುವಂತೆ ಜನವರಿಯಲ್ಲೇ ಆದೇಶ ನೀಡಲಾಗಿದೆ. ಸಿಂಗಲ್‌ ಫೇಸ್‌‍ ಅನ್ನು ಬಲವಂತವಾಗಿ ತ್ರಿಫೇಸ್‌‍ ಮಾಡಿದರೆ ಒತ್ತಡ ಹೆಚ್ಚಾಗಿ ವಿದ್ಯುತ್‌ ಸಲಕರಣೆ ಸುಟ್ಟು ಹೋಗುತ್ತವೆ ಎಂದು ಎಚ್ಚರಿಸಿದರು.

ಪ್ರತಿಯೊಬ್ಬ ಎಕ್ಸಿಕ್ಯೂಟ್‌ ಇಂಜಿನಿಯರ್‌ಗಳು ಶಾಸಕರ ಜೊತೆ ಕಾಲಕಾಲಕ್ಕೆ ಚರ್ಚೆ ಮಾಡಿ ಸಮಸ್ಯೆ ತಿಳಿದುಕೊಂಡು, ಬಗೆಹರಿಸುವಂತೆ ಆದೇಶ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ