Breaking News

ಪುಟ್ಟ ಬಾಲಕಿ ಮೇಲೆ ಕಾಮುಕನಿಂದ ಅತ್ಯಾಚಾರ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಲ್ಲಿ ನಡೆದ ಘಟನೆ

Spread the love

ಪುಟ್ಟ ಬಾಲಕಿ ಮೇಲೆ ಕಾಮುಕನಿಂದ ಅತ್ಯಾಚಾರ

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಲ್ಲಿ ನಡೆದ ಘಟನೆ

ಪೋತ್ನಾಳ್ ಗ್ರಾಮದ ವಿದ್ಯಾಭಾರತಿ ಶಾಲೆಯಲ್ಲಿ 2ನೆ ತರಗತಿಯ ವಿದ್ಯಾರ್ಥಿನಿ

ಮುದ್ದಂಗುಡ್ಡಿ‌ ಗ್ರಾಮದ ಶಿವನಗೌಡನಿಂದ ಅತ್ಯಾಚಾರ

ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲು

ಎಸ್ಪಿ ಪುಟ್ಟ ಮಾದಯ್ಯ, ಡಿವೈಎಸ್ಪಿ ತಳವಾರ ಭೇಟಿ

 

ಕಾಮುಕರ ಮನಸ್ಥಿತಿ ಯಾವ ರೀತಿ ಇರುತ್ತದೆ ಹುಷಾರಾಗಿರಿ ಎಂದು ಸರಕಾರ ಆಗಾಗ್ಗೆ ತಿಳಿ ಹೇಳುತ್ತಿರುತ್ತದೆ.ಆದರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮುದ್ದಂಗುಡ್ಡಿ ಪುಟ್ಟ ಕಂದಮ್ಮಳ ಮೇಲೆ ಶಿವನಗೌಡ ಎಂಬ ವ್ಯಕ್ತಿ ಅತ್ಯಾಚಾರ ಎಸಗಿದ್ದು, ಫೋಕ್ಸೋ ಪ್ರಕರಣ ದಾಖಲಾಗಿದೆ.

ಮಾನ್ವಿ ತಾಲೂಕಿನ ಮುದ್ದುಂಗುಡ್ಡಿ ಗ್ರಾಮದ ಪುಟ್ಟ ಕಂದಮ್ಮ ಪೋತ್ನಾಳ ಗ್ರಾಮದ ರಾಜು ತಾಳಿಕೋಟಿ ಅವರ ವಿದ್ಯಾಭಾರತಿ ಶಾಲೆಯಲ್ಲಿ ಎರಡನೆ ತರಗತಿಯಲ್ಲಿ ಓದುತ್ತಿದ್ದಳು.

ಪೋಷಕರು ಬಂದ ನಂತರ ಮಕ್ಕಳನ್ನು ಹೊರಗಡೆ ಕಳಿಸಬೇಕು.ಆದರೆ ಪೋತ್ನಾಳ ಗ್ರಾಮದಲ್ಲಿರುವ ವಿದ್ಯಾಭಾರತಿ ಶಾಲೆಯ ಸಿಬ್ಬಂದಿ ಅತ್ಯಾಚಾರಕ್ಕೊಳಗಾದ ಪುಟ್ಟ ಕಂದಮ್ಮಳಿಗೆ ಸಂಬಂಧಿಕರಲ್ಲದಿದ್ದರೂ ಶಿವನಗೌಡರೊಂದಿಗೆ ಬೈಕ್ ನಲ್ಲಿ ಕಳಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಪೋಷಕರ ಆರೋಪವಾಗಿದೆ.

 

ಅತ್ಯಾಚಾರಕ್ಕೊಳಗಾದ ಪುಟ್ಟ ಕಂದಮ್ಮಳನ್ನು ಪೋಷಕರು ಮಾನ್ವಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸ್ ಇಲಾಖೆ ಸಿಬ್ಬಂದಿ ತನಿಖೆ ನಡೆಸಿ ಆರೋಪಿ ಶಿವನಗೌಡನನ್ನು ಬಂಧಿಸಿ ಮಾನ್ವಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ