Breaking News

ದಾವಣಗೆರೆಯಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಅನ್ಯ ಕೋಮಿನ ಆರೋಪಿಗೆ ಕಠಿಣ ಶಿಕ್ಷೆ ನೀಡಿ; ಬೆಳಗಾವಿ ಶ್ರೀರಾಮಸೇನೆ ಆಗ್ರಹ

Spread the love

ದಾವಣಗೆರೆ ಜಿಲ್ಲೆಯ ಚೆನ್ನಗಿರಿಯಲ್ಲಿ ನಡೆದ ವಿದ್ಯಾರ್ಥಿನಿಯರು ಮತ್ತು ಹಿಂದೂ ಮಹಿಳೆಯರನ್ನು ಪುಸಲಾಯಿಸಿ, ಮತ್ತು ಬರುವ ಮಾತ್ರೆ ನೀಡಿ ಬಲಾತ್ಕಾರಗೈದು ವಿಡಿಯೋ ಹರಿಬಿಟ್ಟ ಅನ್ಯ ಕೋಮಿನ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಶ್ರೀರಾಮಸೇನೆ ಬೆಳಗಾವಿ ಆಗ್ರಹಿಸಿದೆ.

ದಾವಣಗೆರೆ ಜಿಲ್ಲೆಯ ಚೆನ್ನಗಿರಿಯಲ್ಲಿ ಮೆಡಿಕಲ್ ಶಾಪಗೆ ಬರುತ್ತಿದ್ದ ವಿದ್ಯಾರ್ಥಿನಿಯರು ಮತ್ತು ಹಿಂದೂ ಮಹಿಳೆಯರನ್ನು ಪುಸಲಾಯಿಸಿ, ಮತ್ತು ಬರುವ ಮಾತ್ರೆ ನೀಡಿ ಬಲಾತ್ಕಾರಗೈದು ವಿಡಿಯೋ ಹರಿಬಿಟ್ಟ ಅನ್ಯ ಕೋಮಿನ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಶ್ರೀರಾಮಸೇನೆ ಬೆಳಗಾವಿಯ ವತಿಯಿಂದ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಗೃಹ ಸಚಿವರಿಗೆ ಮನವಿಯನ್ನು ಸಲ್ಲಿಸಲಾಗಿದೆ.

ಈ ವೇಳೆ ಮಾತನಾಡಿದ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ರವಿಕುಮಾರ್ ಕೋಕಿತಕರ ಅವರು ದಾವಣಗೆರೆ ಜಿಲ್ಲೆಯ ಚೆನ್ನಗಿರಿಯಲ್ಲಿ ಮೆಡಿಕಲ್ ಶಾಪಗೆ ಬರುತ್ತಿದ್ದ ವಿದ್ಯಾರ್ಥಿನಿಯರು ಮತ್ತು ಹಿಂದೂ ಮಹಿಳೆಯರನ್ನು ಪುಸಲಾಯಿಸಿ, ಮತ್ತು ಬರುವ ಮಾತ್ರೆ ನೀಡಿ ಅತ್ಯಾಚಾರಗೈದು ವಿಡಿಯೋ ಹರಿಬಿಟ್ಟಿದ್ದಾನೆ. ಈ ಅನ್ಯ ಕೋಮಿನ ವ್ಯಕ್ತಿಯ ಅಟ್ಟಹಾಸಕ್ಕೆ ಗುರಿಯಾದವರಿಗೆ ಪರಿಹಾರವನ್ನು ನೀಡಬೇಕು ಹಾಗೂ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಲವ್ ಜಿಹಾದ್, ವೇಶ್ಯಾವಾಟಿಕೆ, ಮಾನವ ಸಾಗಾಣಿಕೆಗಳನ್ನು ತಪ್ಪಿಸಲು ವಿಶೇಷ ಮಹಿಳಾ ಪೊಲೀಸರನ್ನು ನೇಮಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿನಯ ಅಂಗ್ರೋಳ್ಳಿ, ವಿಠ್ಠಲ ಗಡ್ಡಿ ಸೇರಿದಂತೆ ಶ್ರೀರಾಮಸೇನೆ ಬೆಳಗಾವಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ