144 ವರ್ಷಕ್ಕೆ ಒಮ್ಮೆ ಬರುವ ಮಹಾಕುಂಭಮೇಳದ ಮಹತ್ವ
Laxminews 24x7
ಜನವರಿ 14, 2025
ರಾಜಕೀಯ, ರಾಜ್ಯ
151 Views
ಮಹಾ ಕುಂಭಮೇಳವು 144 ವರ್ಷಗಳಿಗೊಮ್ಮೆ ನಡೆಯುವ ಪವಿತ್ರ ಧಾರ್ಮಿಕ ಕಾರ್ಯಕ್ರಮ. ಗುರು ಗ್ರಹದ ಚಲನೆಯನ್ನು ಆಧರಿಸಿ ನಡೆಯುವ ಈ ಮೇಳವು ಪುಣ್ಯ ಪ್ರಾಪ್ತಿ ಮತ್ತು ಪಾಪ ಪರಿಹಾರಕ್ಕೆ ಅತ್ಯಂತ ಶುಭ ಸಮಯ.
ಪೌಷ ಮಾಸದ ಪುಷ್ಯ ನಕ್ಷತ್ರದಲ್ಲಿ ನಡೆಯುವ ಈ ಮೇಳದಲ್ಲಿ ಸಂಗಮದಲ್ಲಿ ಸ್ನಾನ ಮಾಡುವುದು ವಿಶೇಷ ಫಲವನ್ನು ನೀಡುತ್ತದೆ. ಗುರು ಶಾಪ, ಪಿತೃ ಋಣ ಇತ್ಯಾದಿಗಳಿಂದ ಬಳಲುವವರಿಗೆ ಇದು ಪರಿಹಾರಕಾರಿ. ಶುದ್ಧ ಮನಸ್ಸಿನೊಂದಿಗೆ ಸ್ನಾನ ಮಾಡುವುದು ಮುಖ್ಯ.
ಕಾಲ ಮನುಷ್ಯನ ಉನ್ನತಿಯನ್ನು ಬಯಸಿ ಕೆಲವು ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತವೆ. ಅಂತಹದರಲ್ಲಿ ಮಹಾಕುಂಭಮೇಳವೂ ಒಂದು. ಇದು ಮನುಷ್ಯ ದೋಷದಿಂದ ಮುಕ್ತನಾಗಲು ಪುಣ್ಯವನ್ನು ಪಡೆಯಲು ಇರುವ ಅಪೂರ್ವ ಪರ್ವ. ಇದು ದೇವತೋಪಾಸನೆಗೆ ಇರುವ ಮುಖ್ಯ ಕಾಲವಲ್ಲ.
ಈ ಸಂದರ್ಭದಲ್ಲಿ ಮಾಡುವ ಮಜ್ಜನಕ್ಕೆ ವಿಶೇಷ ಫಲವನ್ನು ಪ್ರಾಚೀನರು ಕಂಡುಕೊಂಡಿದ್ದಾರೆ. ದೇಶ ಕಾಲವನ್ನು ಹೇಳಿಕೊಂಡು ಸ್ನಾನದ ಉದ್ದೇಶವನ್ನು ಮನಸ್ಸಿನಲ್ಲಿ ಸ್ಮರಿಸಿ ಸಂಕಲ್ಪ ಮಾಡಿದರೆ ಮಾಡಿದ ಸ್ನಾನ ಫಲಿಸುತ್ತದೆ. ಹಾಗಾಗಿ ಇದು ವಿಶೇಷ ಸಂದರ್ಭ.