Breaking News

ದಕ್ಷಣಿ ಕಾಶಿಯಲ್ಲಿ ನಡೆದ ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ

Spread the love

ಮೈಸೂರು: ದಕ್ಷಿಣಿ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ವತಿಯಿಂದ ಪಟ್ಟಣದ ರಾಕ್ಷಸ ಮಂಟಪದ ಬಳಿ ಅಂಧಕಾಸುರ ಸಂಹಾರ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಇಲ್ಲಿ ಅಂಧಕಾಸುರ ರಾಕ್ಷಸನನ್ನ ಹೋಲುವ ರಾಕ್ಷಸನನ ಭಾವಚಿತ್ರವನ್ನ ರಂಗೋಲಿಯಲ್ಲಿ ಬಿಡಿಸಿ ಉತ್ಸವ ಮೂರ್ತಿಗಳನ್ನು ತಂದು ಪೂಜೆ ಮಾಡಲಾಯಿತು.

ಅಂಧಕಾಸುರ ಭಾವಚಿತ್ರದ ರಂಗೋಲಿಯನ್ನು ಅಳಿಸಿ ಹಾಕುವ ಆಚರಣೆ ಇದಾಗಿದ್ದು, ಇದಕ್ಕೆ ಐತಿಹಾಸಿಕ ಹಿನ್ನೆಲೆಯೂ ಉಂಟು. ಧರ್ನುಮಾಸದ, ಆರಿದ್ರ ನಕ್ಷತ್ರದ ಹುಣ್ಣಿಮೆಯ ಹಿಂದಿನ ದಿನ ದೇವಾಲಯದ ವತಿಯಿಂದ ರಾಕ್ಷಸ ಮಂಟಪದ ಬಳಿ ಅಂಧಕಾಸುರ ರಾಕ್ಷಸನನ್ನ ಹೋಲುವ ರಾಕ್ಷಸನ ಚಿತ್ರವನ್ನ ರಂಗೋಲಿಯಲ್ಲಿ ಬಿಡಲಾಗುತ್ತದೆ. ಆ ರಂಗೋಲಿಯ ಬಳಿ ಪೂಜೆ, ಧಾರ್ಮಿಕ ವಿಧಿ – ವಿಧಾನಗಳ ಮೂಲಕ ಆ ಭಾವಚಿತ್ರಕ್ಕೆ ಜೀವತುಂಬಿ ಬಳಿಕ ರಾಕ್ಷಸ ಭಾವಚಿತ್ರಕ್ಕೆ ದಿಗ್ಬಂಧನ ಹಾಕಲಾಗುತ್ತದೆ. ಬಳಿಕ ತಾಂಡವೇಶ್ವರ ಹಾಗೂ ಪಾರ್ವತಿ ದೇವಿಯ ಉತ್ಸವ ಮೂರ್ತಿಗಳನ್ನ ತಂದು ಅಂಧಕಾಸುರ ರಂಗೋಲಿಯ ಭಾವಚಿತ್ರದ ಮೇಲೆ ಹೆಜ್ಜೆ ಹಾಕಿ ಅದನ್ನು ಅಳಿಸುವ ಮೂಲಕ ಅಂಧಕಾಸುರ ವಧೆ ಆಚರಣೆ ಆಚರಿಸುವುದು ರೂಢಿ. ಇದನ್ನ ಪ್ರತಿ ವರ್ಷ ಹುಣ್ಣಿಮೆ ದಿನ ಆಚರಿಸಿಕೊಂಡು ಬರಲಾಗುತ್ತಿದೆ.ಐತಿಹಾಸಿಕ ಹಿನ್ನೆಲೆ: ಅಂಧಕಾಸುರ ಆಚರಣೆಯು ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಪುರಾತನ ಕಾಲದಲ್ಲಿ ರಾಕ್ಷಸರು ದೇವಾನುದೇವತೆಗಳಿಗೆ, ಋಷಿ ಮುನಿಗಳಿಗೆ ತೊಂದರೆ ಕೊಡುತ್ತಿದ್ದರು. ಅದರಲ್ಲಿ ಕುರೂಪಿಯು ಹಾಗೂ ಕುರುಡನೂ ಆದ ಅಂಧಕಾಸುರ ಎಂಬ ರಾವಣ ದೇವಾನುದೇವತೆಗಳಿಗೆ, ಋಷಿ ಮುನಿಗಳಿಗೆ ಹಾಗೂ ಜನರಿಗೆ ಬಹಳ ತೊಂದರೆ ಕೊಡುತ್ತಿದ್ದ. ಆಗ ದೇವಾನುದೇವತೆಗಳು ಅಂಧಕಾಸುರನ ಕಿರುಕುಳದ ಬಗ್ಗೆ ವಿಷ್ಣು ಬಳಿ ಕೇಳಿದಾಗ, ವಿಷ್ಣು ಈ ವಿಚಾರವನ್ನ ಈಶ್ವರ ಬಳಿ ಕೇಳಿತ್ತಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ