Breaking News

ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ಜಾಮೀನು ಆದರೂ ದರ್ಶನ್‌ಗೆ ನೆಮ್ಮದಿ ಇಲ್ಲ. ಮತ್ತೆ ಜೈಲು ಸೇರುವ ಭೀತಿ?

Spread the love

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಸೇರಿದಂತೆ ಇತರೆ ಏಳು ಆರೋಪಿಗಳಿಗೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ.
ಹೀಗಾಗಿ 5 ತಿಂಗಳ ಜೈಲುವಾಸದ ಬಳಿಕ ರೇಣುಕಾಸ್ವಾಮಿ ಕೊಲೆ ಆರೋಪಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಡಿಬಾಸ್​ಗೆ ಜಾಮೀನು ಸಿಕ್ಕಿರುವುದು ಅವರ ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಎಲ್ಲೆಡೆ ಫ್ಯಾನ್ಸ್​ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಆದ್ರೆ, ದರ್ಶನ್​ಗೆ ಮಾತ್ರ ಎರಡೆರಡು ಟೆನ್ಷನ್ ಶುರುವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ತಿಂಗಳ ಜೈಲುವಾಸದ ಬಳಿಕ ಆರೋಪಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ದರ್ಶನ್‌ ಸೇರಿದಂತೆ ಏಳು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಇಂದು (ಡಿಸೆಂಬರ್ 13) ಷರತ್ತು ಬದ್ದ ಜಾಮೀನು ನೀಡಿದೆ.
ಬಟ್ಟೆಗಳಲ್ಲಿ ರಕ್ತದ ಕಲೆ, ಮೊಬೈಲ್ ಸಿಡಿಆರ್ ವಿವರ ಸೇರಿದಂತೆ ಇತ್ಯಾದಿಗಳ‌ ಬಗ್ಗೆ ಸಾಕ್ಷಿ ವಿಚಾರಣೆ ಬಳಿಕವಷ್ಟೇ ನಿರ್ಣಯಕ್ಕೆ ಬರಲು ಸಾಧ್ಯ ಎಂದಿರುವ ಕೋರ್ಟ್‌, ಗ್ರೌಂಡ್ಸ್ ಆಫ್ ಅರೆಸ್ಟ್ ಬಗ್ಗೆ ಹೆಚ್ಚಿನ ಒತ್ತು ನೀಡಿದೆ.
ಗ್ರೌಂಡ್ಸ್ ಆಫ್ ಅರೆಸ್ಟ್ ಸರಿಯಾಗಿಲ್ಲದಿದ್ದರೆ ಜಾಮೀನು ನೀಡಬಹುದು. ಹೀಗಂತಾ ಸುಪ್ರೀಂ ಕೋರ್ಟ್ ಪ್ರಬೀರ್ ಪುರಕಾಯಸ್ತ ಕೇಸಿನ ತೀರ್ಪು ಉಲ್ಲೇಖಿಸಿ, ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ಜಾಮೀನು ನೀಡಿದೆ.
ಆದರೂ ದರ್ಶನ್‌ಗೆ ನೆಮ್ಮದಿ ಇಲ್ಲ. ಮತ್ತೆ ಜೈಲು ಸೇರುವ ಭೀತಿ ಅವರಲ್ಲಿ ಕಾಡುತ್ತಿದೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ