Breaking News

ರಾಜ್ಯದ ಒಂದೊಂದೇ ಜೈಲಿನ ಕೈದಿಗಳ ಐಷಾರಾಮಿ ಜೀವನ ಅನಾವರಣ

Spread the love

ರಾಜ್ಯದ ಒಂದೊಂದೇ ಜೈಲಿನ ಕೈದಿಗಳ ಐಷಾರಾಮಿ ಜೀವನ ಅನಾವರಣಗೊಳ್ಳುತ್ತಿದೆ. ಕಲಬುರಗಿ ಬಳಿಕ ಇದೀಗ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳು ಆರಾಮವಾಗಿ ಕಾಲ ಕಳೆಯುತ್ತಿರುವ ಆರೋಪಗಳು ಕೇಳಿ ಬಂದಿವೆ.

ಹಣ ನೀಡಿದರೆ ಕೈದಿಗಳಿಗೆ ಎಲ್ಲಾ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಕೈದಿಗಳು ಜೈಲಿನಲ್ಲಿಯೇ ಆಂಡ್ರಾಯ್ಡ್ ಮೊಬೈಲ್, ಹಣ ಇಟ್ಟು ಇಸ್ಪೀಟ್ ಆಡುವುದು ಮಾಡುತ್ತಿದ್ದಾರೆ.

ಗಾಂಜಾ, ಬೀಡಿ, ಸಿಗರೇಟ್, ಬೀಯರ್ ಹೀಗೆ ಎಲ್ಲವನ್ನೂ ಹೊರಗಡೆಯಿಂದ ತರಿಸಿಕೊಂಡು ರಾಜರೋಷವಾಗಿ ಕಾಲಕಳೆಯುತ್ತಿದ್ದಾರೆ.ಕೈದಿ ಸುರೇಶ್ ಎಂಬಾತ ಇಸ್ಪೀಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಶಾಹಿದ್ ಖುರೇಶಿ, ಆನಂದ್ ನಾಯಕ್ ಸೇರಿ ಸುರೇಶ್ ಜೊತೆ ಇಸ್ಪೀಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕೈದಿಗಳಿಗೆ ಜೈಲಿನಲ್ಲಿ ಈ ಎಲ್ಲಾ ವ್ಯವಸ್ಥೆಗಳು ಸಿಗುತ್ತಿರುವುದಾದರೂ ಹೇಗೆ? ಎಂಬ ಪ್ರಶ್ನೆ ಮೂಡಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ