Breaking News

ನೌಕರರಿದ್ದರೂ, ವಿಧಾನಸೌಧ ಸ್ವಚ್ಛ ಮಾಡಲು 59 ಲಕ್ಷ

Spread the love

ಬೆಂಗಳೂರು: ರಾಜ್ಯದ ಶಕ್ತಿಸೌಧ ವಿಧಾನಸೌಧವನ್ನು ಸ್ವಚ್ಛ ಮಾಡಲು ಪಿಡಬ್ಲ್ಯುಡಿ ಇಲಾಖೆ 59 ಲಕ್ಷ ವೆಚ್ಚದಲ್ಲಿ ಟೆಂಡರ್ ಕರೆದು ದುಂದು ವೆಚ್ಚಕ್ಕೆ ಮುಂದಾಗಿದೆ.ವಿಧಾನಸೌಧವನ್ನು ಸ್ವಚ್ಛವಾಗಿ ಇಡಲು ಸ್ವಚ್ಛತಾ ಸಿಬ್ಬಂದಿ, ಪ್ರತಿ ವಿಭಾಗದಲ್ಲಿ ಡಿ ಗ್ರೂಪ್ ನೌಕರರು ಇದ್ದಾರೆ. ಈಗಾಗಲೇ ಪ್ರತಿದಿನ ವಿಧಾನಸೌಧದ ಪ್ರತಿ ಕಚೇರಿ ಹಾಗೂ ಕಾರಿಡಾರ್ ಗಳನ್ನು ಸ್ವಚ್ಛಗೊಳಿಸಲಾಗುತ್ತೆ. ಇವೆಲ್ಲ ಇದ್ದರೂ ವಿಧಾನಸೌಧ ಕ್ಲೀನ್ ಮಾಡಲು ಹೊಸ ಟೆಂಡರ್ ಕರೆಯಲಾಗಿದೆ.

ವಿಧಾನಸೌಧದಲ್ಲಿರುವ ಕಚೇರಿಗಳನ್ನು ಆಯಾ ಇಲಾಖೆಯಲ್ಲಿನ ಡಿ ಗ್ರೂಪ್ ನೌಕರರು ಸ್ವಚ್ಛಗೊಳಿಸುತ್ತಾರೆ. ವಿಧಾನ ಸೌಧದ ಕಾರಿಡಾರ್ ಹಾಗೂ ಹೊರ ಭಾಗದ ಸ್ವಚ್ಛತೆಗೆ ಗುತ್ತಿಗೆ ಆಧಾರಿತ ಕಾರ್ಮಿಕರು ಪ್ರತ್ಯೇಕವಾಗಿದ್ದಾರೆ. ಇಷ್ಟಾಗಿಯೂ ವಿಧಾನಸೌಧದ ಕಾರಿಡಾರ್ ಗಳನ್ನು ನೀರು ಹಾಕಿ ತೊಳೆಯಲು ಪ್ರತ್ಯೇಕ ಟೆಂಡರ್ ಕರೆದಿದ್ದು ಪಿಡಬ್ಲ್ಯುಡಿ ಇಲಾಖೆಯ ಈ ನಿರ್ಧಾರ ಅನುಮಾನ ಕಾರಣವಾಗಿದೆ.

ಕೊರೊನಾ ಸಮಯದಲ್ಲಿ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಿರುವಾಗ ವಿಧಾನಸೌಧದ ಪಿಡಬ್ಲ್ಯುಡಿ ಅಧಿಕಾರಿಗಳು ʼವಾಟರ್ ವಾಶ್ ಹೆಸರಲ್ಲಿ ಟೆಂಡರ್ ಕಾಸು ಮಾಡಲು ಹೊರಟ್ಟಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.


Spread the love

About Laxminews 24x7

Check Also

ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠ ಸ್ಥಾಪನೆ ಆಗಲಿ: ಸಿಎಂ

Spread the loveಬೆಂಗಳೂರು: ದಕ್ಷಿಣ ಭಾರತದಲ್ಲಿ  ಸುಪ್ರೀಂಕೋರ್ಟ್  ಪೀಠ ಸ್ಥಾಪನೆ ಆಗಬೇಕು ಅಂತ ಸಿಎಂ ಸಿದ್ದರಾಮಯ್ಯ  ಒತ್ತಾಯ ಮಾಡಿದ್ದಾರೆ. ಜಿಕೆವಿಕೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ