Breaking News

ಆರ್​ಟಿಒ ಅಧಿಕಾರಿಗಳ, ಬ್ರೋಕರ್​ಗಳ ಲಂಚತನಕ್ಕೆ ಬೀಳಲಿದೆ ಬ್ರೇಕ್: ಇನ್​ಸ್ಪೆಕ್ಟರ್​ಗಳಿಲ್ಲದೆಯೇ ಆಗಲಿದೆ ಎಫ್​ಸಿ

Spread the love

ನವೆಂಬರ್ 27: ಆರ್​ಟಿಒ ಇನ್ಸ್‌ಪೆಕ್ಟರ್​ಗಳಿಲ್ಲದೆಯೇ ಇನ್ಮುಂದೆ ಆಗಲಿದೆ ಎಫ್​ಸಿ! ಎಫ್​ಸಿ ಮಾಡಲು ಸಾರಿಗೆ ಇಲಾಖೆ Automatic Testing Station (ATS) ತೆರೆದಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನೆಲಮಂಗಲ ಆರ್​ಟಿಒದಲ್ಲಿ ಎಟಿಎಸ್ ಸೆಂಟರ್​​ಗಳನ್ನು ತೆರೆಯಲಾಗಿದೆ. ಈ ಸೆಂಟರ್​​ಗಳಿಗೆ ವಾಹನಗಳನ್ನು ತೆಗೆದುಕೊಂಡು ಹೋದರೆ ಸಾಕು, ಆ ಮಷಿನ್​ಗಳೇ ವಾಹನಗಳಿಗೆ ಪಾಸ್ ಅಥವಾ ಫೇಲ್ ಸರ್ಟಿಫಿಕೇಟ್ ನೀಡುತ್ತವೆ. ಯಾವುದೇ ಆರ್​ಟಿಓ ಅಧಿಕಾರಿಗಳು, ಬ್ರೋಕರ್​​ಗಳ ಹಾವಳಿ ಇಲ್ಲದೆ ವಾಹನಗಳ ಎಫ್​ಸಿ ಮಾಡಿಸಿಕೊಳ್ಳಬಹುದು‌.

ಈ ಹಿಂದೆ ವಾಹನಗಳಿಗೆ ಎಫ್​ಸಿ ಮಾಡಿಸಬೇಕು ಅಂದರೆ ಗಂಟೆಗಟ್ಟಲೆ ಕಾಯಬೇಕಿತ್ತು. ಆದರೆ ಈಗ ಹತ್ತು ನಿಮಿಷಗಳಲ್ಲಿ ಎಫ್​ಸಿ ಆಗುತ್ತದೆ!

ನಿಯಮಗಳ ಪ್ರಕಾರ, ಯೆಲ್ಲೋ ಬೋರ್ಡ್ ಹೊಸ ವಾಹನಗಳಾಗಿದ್ದರೆ, ಏಳು ವರ್ಷದ ಒಳಗಿನ ವಾಹನಗಳು ಎರಡು ವರ್ಷಕ್ಕೊಮ್ಮೆ ಎಫ್​ಸಿ ಮಾಡಿಸಬೇಕು. ಏಳು ವರ್ಷದ ನಂತರ ವಾಹನಗಳಿಗೆ ಪ್ರತಿವರ್ಷ ಎಫ್​ಸಿ ಮಾಡಿಸಬೇಕು. ವೈಟ್ ಬೋರ್ಡ್ ವಾಹನಗಳಿಗೆ ಹದಿನೈದು ವರ್ಷಕ್ಕೊಮ್ಮೆ ಎಫ್​ಸಿ ಮಾಡಿಸಬೇಕು. ನಂತರ ಐದು ವರ್ಷಕೊಮ್ಮೆ ಎಫ್​ಸಿ ಮಾಡಿಸಬೇಕು.

ಎಫ್​ಸಿ ಮಾಡುವಾಗ ನಡೆಸುವ ತಪಾಸಣೆಗಳು ಏನೇನು?

  • ಇಂಜಿನ್ ಸೌಂಡ್
  • ಹೊಗೆ ತಪಾಸಣೆ
  • ಸ್ಪೀಡ್ ಗವರ್ನರ್
  • ಹೆಡ್ ಲೈಟ್
  • ಇಂಡಿಕೇಟರ್
  • ವೈಪರ್
  • ಹಾರನ್
  • ಬ್ರೇಕ್ ಲೈಟ್ಸ್
  • ಪೇಟಿಂಗ್
  • ಬಾಡಿ ಡೆಟೋರೆಟೆಡ್
  • ಟೈರ್​ಗಳ ತಪಾಸಣೆ
  • ವೆಹಿಕಲ್ ವೈಬ್ರೇಷನ್
  • ಇಂಜಿನ್ ಆಯಿಲ್ ಫಿಟ್ನೆಸ್

ಅಕ್ರಮ ತಡೆಗೆ ಎಟಿಎಸ್ ಮಷಿನ್ ಹೇಗೆ ಸಹಕಾರಿ?

ಈ ಹಿಂದೆ ಎಫ್​ಸಿಗೆ ಹೋಗುವ ವಾಹನಗಳಲ್ಲಿ ಎಲ್ಲಾ ಸರಿ ಇದ್ದರೂ ಆರ್​ಟಿಒ ಇನ್ಸ್‌ಪೆಕ್ಟರ್​ಗಳು ಏನಾದರೂ ಕಾರಣ ಹೇಳಿ ಎಫ್​ಸಿ ಫೇಲ್ ಮಾಡಿಸುತ್ತಿದ್ದರು. ಇದೀಗ ಈ ಎಟಿಎಸ್​ಗಳಿಂದ ಆ ರೀತಿ ಮಾಡಲು ಆಗುವುದಿಲ್ಲ. ಪ್ರತಿಯೊಂದನ್ನೂ ಈ ಮಷಿನ್​​ಗಳು ಪರಿಶೀಲನೆ ಮಾಡಲಿವೆ. ಈ ಮಷಿನ್ ಮೂಲಕ ಸ್ಥಳದಲ್ಲೇ ವಾಹನ ಮಾಲೀಕರಿಗೆ ಎಫ್​ಸಿ ಸರ್ಟಿಫಿಕೇಟ್ ದೊರೆಯುತ್ತದೆ. ಈ ಬಗ್ಗೆ ವಾಹನ ಮಾಲೀಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ