Breaking News

BPL’ ಕಾರ್ಡ್ ಬೆನ್ನಲ್ಲೆ, ರಾಜ್ಯದ 2 ಲಕ್ಷಕ್ಕೂ ಅಧಿಕ ‘ನಕಲಿ’ ಕಟ್ಟಡ ಕಾರ್ಮಿಕರ ಕಾರ್ಡ್ ಗಳು ರದ್ದು!

Spread the love

ಬೆಂಗಳೂರು : ರಾಜ್ಯದಲ್ಲಿ ಅರ್ಹರಲ್ಲದವರು ಕೂಡ ಬಿಪಿಎಲ್ ಕಾರ್ಡ್ ಗಳನ್ನು ಪಡೆದುಕೊಂಡಿದ್ದರಿಂದ ಇದೀಗ ಸರ್ಕಾರ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿದೆ. ಬಿಪಿಎಲ್ ಕಾರ್ಡ್ ಬೆನ್ನಲ್ಲೇ ಕಾರ್ಮಿಕ ಕಾರ್ಡುಗಳ ಅಮಾನತು ಮಾಡಲಾಗಿದ್ದು, ರಾಜ್ಯದಲ್ಲಿ 2.46 ಲಕ್ಷ ಕಾರ್ಮಿಕರ ನಕಲಿ ಕಾರ್ಡುಗಳು ಅಮಾನತು ಮಾಡಲಾಗಿದೆ.

2,46, 951 ನಕಲಿ ಕಾರ್ಡ್ ಗಳನ್ನು ಅಮಾನತು ಮಾಡಲಾಗಿದೆ.

ಹೌದು ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 38.42 ಲಕ್ಷ ಕಾರ್ಡ್ ಗೆ ನೋಂದಣಿ ಮಾಡಿಕೊಂಡಿದ್ದು. 2.46 ಲಕ್ಷ ಸಾವಿರ ಕಾರ್ಡ್ ಅಮಾನತು ಮಾಡಲಾಗಿದೆ. ಹಾವೇರಿಯಲ್ಲಿ 1.69 ಲಕ್ಷ ಕಾರ್ಡ್ ಗಳು ಕಾರ್ಮಿಕ ಕಾರ್ಡ್ ಗಳನ್ನು ಅಮಾನತು ಮಾಡಲಾಗಿದೆ. ಬಿಪಿಎಲ್ ಬೆನ್ನಲ್ಲೇ ಕಾರ್ಮಿಕ ಕಾರ್ಡ್ ಗಳನ್ನು ಇದೀಗ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಸಚಿವ ಸಂತೋಷ ಲಾಡ್ ಮಾತನಾಡಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಹಾವೇರಿಯಲ್ಲಿ ಸುಮಾರು ಎರಡೂವರೆ ಲಕ್ಷ 3 ಲಕ್ಷ ಕಾರ್ಡ್‌ ಮಾಡಿದ್ದಾರೆ. ಅಲ್ಲಿ ಪರಿಶೀಲಿಸಿದ ನಂತರ ಕಾರ್ಡ್‌ಗಳನ್ನು ರದ್ದು ಪಡಿಸಿದ್ದೇವೆ. ಅದೇ ರೀತಿ ಎಲ್ಲಾ ಜಿಲ್ಲೆಯಲ್ಲೂ ಇದೇ ರೀತಿ ಮಾಡಲಾಗುತ್ತಿದೆ. ನಮ್ಮ ಸರ್ಕಾರಕ್ಕೆ ಯಾರು ಆದಾಯವನ್ನು ಗಳಿಸಲು ಸಹಾಯ ಮಾಡಿದ್ದಾರೋ ಅವರಿಗೆ ಕಾರ್ಮಿಕ ಕಾರ್ಡ್‌ ಅನ್ನು ನೀಡುತ್ತೇವೆ ಎಂದು ಹೇಳಿದರು.

ಕಾರ್ಮಿಕರ ಕಾರ್ಡ್ ಪರಿಶೀಲನೆ ಯಾವುದೇ ಕಾರಣಕ್ಕೂ ಇಲ್ಲ. ಅಂಬೇಡ್ಕರ್ ಸೇವಾ ಕೇಂದ್ರ ಮಾಡಿದ್ದೇವೆ. ಯಾರು ಅರ್ಜಿ ಹಾಕುತ್ತಾರೋ ಅವರ ಮನೆಗೆ ಹೋಗುತ್ತೇವೆ. ನೇರ ಪರಿಶೀಲನೆ ಮಾಡಿ ಕಾರ್ಡ್ ವಿತರಿಸುತ್ತೇವೆ. ಸಮೀಕ್ಷೆ ಮಾಡಿ ಕಾರ್ಮಿಕ ಕಾರ್ಡ್ ಅಮಾನತು ಮಾಡಲಾಗುತ್ತದೆ. ರದ್ದಾದ ಕಾರ್ಡ್ ನಕಲಿ ಅಲ್ಲದಿದ್ದರೆ ಪುನಃ ನೀಡಲಾಗುತ್ತೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಪಷ್ಟನೆ ನೀಡಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ