Breaking News
2000 Indian rupees money composition. Financial background. Many banknotes and wads of money. Business or economy concept. Cash. 3D render.

ಶಿಗ್ಗಾಂವಿ ಉಪಚುನಾವಣೆ: ಮತದಾರರಿಗೆ ಹಂಚಲು ತಂದಿದ್ದ 2.68 ಲಕ್ಷ ರೂ. ಜಪ್ತಿ

Spread the love

ಶಿಗ್ಗಾಂವಿ ಉಪಚುನಾವಣೆ: ಮತದಾರರಿಗೆ ಹಂಚಲು ತಂದಿದ್ದ 2.68 ಲಕ್ಷ ರೂ. ಜಪ್ತಿ

 

ಹಾವೇರಿ: ಮೂರು ಕ್ಷೇತ್ರಗಳ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ತೆರೆಬೀಳಲಿದೆ. ರಾಜಕೀಯ ನಾಯಕರು ಮತದಾರರನ್ನು ಓಲೈಸಲು ಕೊನೇ ಕ್ಷಣದ ಪ್ರಯತ್ನ ನಡೆಸಿದ್ದಾರೆ. ಈ ನಡುವೆ ಶಿಗ್ಗಾಂವಿಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 2.68 ಲಕ್ಷ ರು ಹಣವನ್ನು ಎಫ್ ಎಸ್ ಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

 

ಸವಣೂರಿನ ಸುಭಾಷ್ ಗಡ್ಡೆಪ್ಪನವರ್ ಎಂಬುವವರ ಮನೆಯಲ್ಲಿ ಹಣ ಸಂಗ್ರಹಿಸಿ ಇಡಲಾಗಿತ್ತು. ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಈ ಹಣ ಸಂಗ್ರಹಿಸಲಾಗಿದೆ ಎಂದು ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಆರೋಪಿಸಿದ್ದರು.

ಖಚಿತ ಮಾಹಿತಿ ಮೇರೆಗೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಮನೆಯಲ್ಲಿದ್ದ ಒಟ್ಟು 2.68 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ. ಆರೋಪಿ ಸುಭಾಷ್ ಗಡ್ಡೆಪ್ಪನವರ್ ವಿರುದ್ಧ ಎನ್ ಸಿಆರ್ ದಾಖಲಿಸಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ