Breaking News

ಸೆಕ್ಸ್ ವೀಡಿಯೋ ತೋರಿಸಿ ರೇಪ್ – ನಿರ್ದೇಶಕನ ವಿರುದ್ಧ ನಟಿ ದೂರು

Spread the love

ಮುಂಬೈ: ನಿರ್ದೇಶಕ ಆಯುಷ್ ತಿವಾರಿ ವಿರುದ್ಧ ಕಿರುತೆರೆ ಮತ್ತು ವೆಬ್ ಸಿರೀಸ್ ನಟಿ ಅತ್ಯಾಚಾರದ ಆರೋಪ ಮಾಡಿ ಮುಂಬೈನ ವಾರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ನಿರ್ದೇಶಕ ಆಯುಷ್ ತಿವಾರಿ ಸಹ ದೂರ ದಾಖಲಾದ ಕುರಿತು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.ನಿರ್ದೇಶಕ ಕೆಲವು ದಿನಗಳಿಂದ ತಮಗೆ ಪೋರ್ನ್ ವೀಡಿಯೋಗಳನ್ನ ತೋರಿಸಿ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ನಟಿ ದೂರಿನಲ್ಲಿ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಟಿಯ ಹೇಳಿಕೆಯನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮುಂದಿನ ವಾರ ಆರೋಪಿ ನಿರ್ದೇಶಕರನ್ನ ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಬ್ಬರಿಗೂ ಎರಡು ವರ್ಷದ ಪರಿಚಯ: ಆಯುಷ್ ತಿವಾರಿ ವೆಬ್ ಸಿರೀಸ್ ನಲ್ಲಿ ನಟಿಸುವ ಅವಕಾಶ ನೀಡಿದ್ದರು. ನಂತರ ಮದುವೆ ಆಗೋದಾಗಿನಂಬಿಸಿ ಹಲವು ಬಾರಿ ರೇಪ್ ಮಾಡಿದ್ದಾರೆ ಎಂದು ನಟಿ ಹೇಳಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ನಟಿ ಮತ್ತು ನಿರ್ದೇಶಕ ಕಳೆದು ಎರಡು ವರ್ಷಗಳಿಂದ ಪರಿಚಯಸ್ಥರು ಎಂಬುದು ತಿಳಿದು ಬಂದಿದೆ.

ಸೆಕ್ಸ್ ವೀಡಿಯೋ ಕಳಿಸ್ತಿದ್ದ!: ಆಯುಷ್ ತಿವಾರಿ ಮದುವೆ ಆಗೋದಾಗಿ ನಟಿಯನ್ನ ನಂಬಿಸಿದ್ದನು. ಹಾಗಾಗಿ ಆಕೆಯನ್ನ ದೈಹಿಕವಾಗಿ ಬಳಸಿಕೊಂಡಿದ್ದನು. ನಟಿಗೆ ಸೆಕ್ಸ್ ವೀಡಿಯೋಗಳನ್ನ ಸಹ ತೋರಿಸುತ್ತಿದ್ದನು ನಟಿ ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ನಟಿ ಆಯುಷ್ ನಿಂದ ದೂರವಾಗಿದ್ದರು. ಆದ್ರೂ ಆರೋಪಿ ನಟಿ ಮೊಬೈಲ್ ಗೆ ಅಶ್ಲೀರ ವೀಡಿಯೋಗಳನ್ನು ಕಳುಹಿಸುತ್ತಿದ್ದನು. ಹಲವು ಬಾರಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ